ಜಗತ್ತಿನ ಬಹುತೇಕ ಜನರು ಬಲಗೈ ಅಥವಾ ಎಡಗೈ, ಎರಡರಲ್ಲಿ ಒಂದನ್ನು ಬಳಸಿ ಕೆಲಸ ಮಾಡುತ್ತಾರೆ. ಕೆಲವರು ಎರಡೂ ಕೈಗಳನ್ನು ಸಮನಾಗಿ ಬಳಸುತ್ತಾರೆ.
ನೆದರ್ಲೆಂಡ್ಸ್‌ನ ಕಲಾವಿದೆಯೊಬ್ಬರು ತಮ್ಮ ಎರಡೂ ಕೈಗಳೊಂದಿಗೆ ಎರಡೂ ಕಾಲುಗಳನ್ನು ಬಳಸಿಕೊಂಡು ಸಾಕ್ಷಾತ್ ಅಸಲಿ ರೂಪದ ಭಾವಚಿತ್ರಗಳನ್ನು ಬಿಡಿಸುವಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಇದೀಗ ಈಕೆಯ ಈ ಅದ್ಭುತ ಪ್ರತಿಭೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನತೆಯ ಹುಬ್ಬೇರಿಸಿದೆ.
“ನಾನು ನನ್ನೆರಡೂ ಕಾಲುಗಳು ಹಾಗೂ ಕೈಗಳನ್ನು ಬಳಸಿಕೊಂಡು 8 ವಾಸ್ತವಿಕ ಚಿತ್ರಗಳನ್ನು ಸೃಷ್ಟಿಸಿದ್ದೇನೆ,” ಎಂದು ಹೇಳಿರುವ ಕಲಾವಿದೆ ರಜಸೆನ್ನಾ, ತಮ್ಮ ಈ ಭಗೀರಥ ಪರಿಶ್ರಮದ ಟೈಮ್‌ಲ್ಯಾಪ್ಸ್ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಪ್ರಖ್ಯಾತ ವ್ಯಕ್ತಿಗಳಾದ ಆಲ್ಬರ್ಟ್ ಐನ್‌ಸ್ಟೀನ್, ಜಸ್ಟಿನ್ ಬೀಬರ್, ಜ಼ೆಂಡಾಯಾ ಹಾಗೂ ಖಾಬಿ ಸೇರಿದಂತೆ ಎಂಟು ಮಂದಿಯ ಭಾವಚಿತ್ರಗಳನ್ನು ಬಿಡಿಸಿದ್ದಾರೆ ರಜಸೆನ್ನಾ.