ಹಸಿರು ಬಣ್ಣದ ಹೊಸ ಅವತಾರದಲ್ಲಿ ಬಂತು ಬೊಲೆರೋ

ಮೇಲ್ಮೈ ಬಣ್ಣದ ಮಾರ್ಪಾಡು ಕಂಡಿರುವ ಮಹಿಂದ್ರಾದ ಬೊಲೆರೋ ಇದೀಗ ಹೊಸ ಬೊಲೆರೋ ನಿಯೋ ರಾಕಿ ಬೀಜ್‌ನಂತೆಯೇ ಕಾಣುತ್ತಿದೆ.‌

ದೇಶದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಬೊಲೆರೋ ಮಹಿಂದ್ರಾದ ಅತ್ಯಂತ ಹೆಚ್ಚು ಜನಪ್ರಿಯ ವಾಹನಗಳಲ್ಲಿ ಒಂದಾಗಿದೆ.

ಜಮ್ಮು & ಕಾಶ್ಮೀರದ ಚೆನಾಬ್ ಸೇತುವೆ ಮೇಲೆ ರೈಲು ತಪಾಸಣಾ ಟ್ರಾಲಿಯಂತೆ ಮಾರ್ಪಾಡುಗೊಂಡು ಆನ್ಲೈನ್‌ನಲ್ಲಿ ಗಮನ ಸೆಳೆಯುವುದರಿಂದ ಹಿಡಿದು ತನ್ನ ಸರಳತೆಯ ಕಾರಣಕ್ಕೆ ಗ್ರಾಮೀಣ ಪ್ರದೇಶದಲ್ಲೆಲ್ಲಾ ಭಾರೀ ಮನ್ನಣೆ ಪಡೆದಿರುವ ಬೊಲೆರೋ ಬಹಳಷ್ಟು ಕೆಲಸಗಳಲ್ಲಿ ಭಾಗಿಯಾಗಿದೆ.

ಸದ್ಯ 9.78 ಲಕ್ಷದಿಂದ 19.78 ಲಕ್ಷದ (ಎಕ್ಸ್‌ ಶೋರೂಂ) ನಡುವೆ ಮಾರಾಟವಾಗುತ್ತಿರುವ ಬೊಲೆರೋ; ಡಿಸ್ಯಾಟ್‌ ಸಿಲ್ವರ್‌, ಲೇಕ್‌ಸೈಡ್ ಬ್ರೌನ್ ಹಾಗೂ ಡೈಮಂಡ್‌ ವೈಟ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗುತ್ತಿದೆ. ಇದೀಗ ತನ್ನ ಹೊಸ ಹಸಿರು ಬಣ್ಣದೊಂದಿಗೆ ರಾಕಿ ಬೀ‌ಜ್‌ನಂತೆಯೇ ಕಾಣುತ್ತಿದೆ ಬೊಲೆರೋ.

2020ರಲ್ಲಿ ಬಿಎಸ್‌6 ಲೋಗೋ ಹಾಗೂ ಮಹಿಂದ್ರಾದ ಹೊಸ ಲೋಗೋಗಳ ಸುಧಾರಣೆ ಕಂಡಿದೆ ಬೊಲೆರೋ. ಬಿಎಸ್‌6ಗೆ ಹಿಂದಿನ ಅವತರಣಿಕೆಗಳಲ್ಲಿ ಇದೇ ಹಸಿರು ಬಣ್ಣದ ಅವತಾರಗಳಲ್ಲೂ ಸಹ ಬೊಲೆರೋ ಲಭ್ಯವಿತ್ತು.

ಬಣ್ಣ ಹೊರತು ಪಡಿಸಿದಂತೆ ಬೊಲೆರೋದಲ್ಲಿ ಯಾವುದೇ ಮೆಕ್ಯಾನಿಕಲ್, ಸ್ಪೆಕ್ಸ್‌ ಅಥವಾ ಫೀಚರ್‌ಗಳಲ್ಲಿ ಬದಲಾವಣೆ ಕಂಡು ಬಂದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read