alex Certify ಹಸಿದ್ರಾಕ್ಷಿ ಅಥವಾ ಒಣದ್ರಾಕ್ಷಿ, ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸಿದ್ರಾಕ್ಷಿ ಅಥವಾ ಒಣದ್ರಾಕ್ಷಿ, ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ…..?

ಹಣ್ಣುಗಳು ಹಾಗೂ ಡ್ರೈಫ್ರೂಟ್ಸ್‌ ಸೇವನೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅದೇ ರೀತಿ ದ್ರಾಕ್ಷಿ ಮತ್ತು ಒಣ ದ್ರಾಕ್ಷಿ ಕೂಡ ಸಾಕಷ್ಟು ಆರೋಗ್ಯಕಾರಿ ಅಂಶಗಳನ್ನು ಹೊಂದಿವೆ. ದ್ರಾಕ್ಷಿ ಹುಳಿ-ಸಿಹಿ ಭರಿತ ರುಚಿಕರ ಹಣ್ಣು. ಒಣದ್ರಾಕ್ಷಿಯನ್ನಂತೂ ಸಿಹಿತಿಂಡಿಗಳು ಮತ್ತು ಸಿಹಿ ಭಕ್ಷ್ಯಗಳನ್ನು ಅಲಂಕರಿಸಲು ಬಳಸಲಾಗುತ್ತದೆ. ದ್ರಾಕ್ಷಿಯಲ್ಲಿ 80 ಪ್ರತಿಶತದಷ್ಟು ನೀರು ಇರುತ್ತದೆ. ಆದರೆ ಒಣದ್ರಾಕ್ಷಿಗಳಲ್ಲಿನ ನೀರಿನ ಅಂಶವು ಕೇವಲ 15 ಪ್ರತಿಶತದಷ್ಟು ಮಾತ್ರ ಇರುತ್ತದೆ.

ಯಾವುದು ಹೆಚ್ಚು ಪ್ರಯೋಜನಕಾರಿ?

ದ್ರಾಕ್ಷಿ ಮತ್ತು ಒಣದ್ರಾಕ್ಷಿ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬ ಗೊಂದಲ ಸಹಜ. ತಜ್ಞರು ಹೇಳುವ ಪ್ರಕಾರ ಹಸಿ ದ್ರಾಕ್ಷಿಗಿಂತ ಹೆಚ್ಚಿನ ಕ್ಯಾಲೋರಿಗಳು ಒಣದ್ರಾಕ್ಷಿಗಳಲ್ಲಿ ಕಂಡುಬರುತ್ತವೆ. ಒಣದ್ರಾಕ್ಷಿಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಸಕ್ಕರೆ ಮತ್ತು ಉತ್ಕರ್ಷಣ ನಿರೋಧಕಗಳನ್ನು ಬಳಸಲಾಗುತ್ತದೆ, ಇದು ಕ್ಯಾಲೋರಿಗಳ ರೂಪದಲ್ಲಿ ಪರಿವರ್ತನೆಗೊಳ್ಳುತ್ತದೆ. ಅರ್ಧ ಕಪ್ ಹಸಿ ದ್ರಾಕ್ಷಿಯನ್ನು ತಿಂದರೆ ಕೇವಲ 30 ಕ್ಯಾಲೋರಿಗಳು, ಅದೇ ಪ್ರಮಾಣದ ಒಣದ್ರಾಕ್ಷಿಗಳನ್ನು ತಿಂದಾಗ ದೇಹಕ್ಕೆ 250 ಕ್ಯಾಲೋರಿಗಳು ಸಿಗುತ್ತವೆ.

ಒಣದ್ರಾಕ್ಷಿ ಸೇವನೆಯ ಪ್ರಯೋಜನಗಳು

ಒಣದ್ರಾಕ್ಷಿಗಳಲ್ಲಿ ಫೈಬರ್‌ ಹೇರಳವಾಗಿದೆ. ಕಬ್ಬಿಣ ಮತ್ತು ಪೊಟ್ಯಾಸಿಯಮ್‌ನಂತಹ ಪ್ರಮುಖ ಖನಿಜಗಳು ಇದರಲ್ಲಿ ಕಂಡುಬರುತ್ತವೆ. ಒಣದ್ರಾಕ್ಷಿಯು ಉರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿದೆ, ಇದು ಕರುಳಿನಲ್ಲಿರುವ ಬ್ಯಾಕ್ಟೀರಿಯಾವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಹಸಿ ದ್ರಾಕ್ಷಿಯ ಪ್ರಯೋಜನಗಳು

ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ದ್ರಾಕ್ಷಿಯಲ್ಲಿ ಕಂಡುಬರುತ್ತವೆ. ಈ ಎರಡೂ ಪೋಷಕಾಂಶಗಳು ನಮ್ಮ ಚರ್ಮದ ಕೋಶಗಳನ್ನು ಯಂಗ್‌ ಆಗಿಡಲು ಸಹಾಯ ಮಾಡುತ್ತವೆ. ಚರ್ಮವನ್ನು ಕ್ಯಾನ್ಸರ್‌ಗೆ ಕಾರಣವಾಗುವ ಕಿರಣಗಳಿಂದ ರಕ್ಷಿಸುತ್ತವೆ. ನೀವು ದ್ರಾಕ್ಷಿಯನ್ನು ಸೇವಿಸಿದರೆ ಮುಖದ ಕಪ್ಪು ಕಲೆಗಳು ಮತ್ತು ಸುಕ್ಕುಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ.

ಒಣದ್ರಾಕ್ಷಿ ಮತ್ತು ಹಸಿದ್ರಾಕ್ಷಿ, ಯಾವುದು ಆರೋಗ್ಯಕರ?

ಇವೆರಡೂ ತಮ್ಮದೇ ಆದ ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ. ಆದರೆ ಹಸಿ ದ್ರಾಕ್ಷಿಯನ್ನು ಹೆಚ್ಚು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಕಡಿಮೆ ಕ್ಯಾಲೋರಿ ಹೊಂದಿರುವ ವಸ್ತುವು ಆರೋಗ್ಯಕ್ಕೆ ಉತ್ತಮವಾಗಿದೆ. ಆದ್ದರಿಂದ ಹಣ್ಣನ್ನು ಅದರ ಮೂಲ ರೂಪದಲ್ಲಿ ತಿನ್ನಲು ಪ್ರಯತ್ನಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...