HomeKarnatakaBIG NEWS: ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ದುಬೈ ವಿಮಾನ ತುರ್ತು ಭೂಸ್ಪರ್ಶ

BIG NEWS: ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ದುಬೈ ವಿಮಾನ ತುರ್ತು ಭೂಸ್ಪರ್ಶ

ಬೆಂಗಳೂರು: ದುಬೈಗೆ ತೆರಳಬೇಕಿದ್ದ ವಿಮಾನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶವಾದ ಘಟನೆ ನಡೆದಿದೆ.

ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಲಾಗಿದೆ. ದುಬೈಗೆ ತೆರಳುತ್ತಿದ್ದ ಎತಿಹಾದ್ ವಿಮಾನ ಏರ್ ಪೋರ್ಟ್ ನಿಂದ ಟೇಕ್ ಆಫ್ ಆದ ಕೆಲ ಹೊತ್ತಲ್ಲೇ ಮತ್ತೆ ವಾಪಸ್ ಏರ್ ಪೋರ್ಟ್ ಗೆ ಆಗಮಿಸಿದೆ.

EY 237 ಸಂಖ್ಯೆಯ ಎತಿಹಾದ್ ವಿಮಾನ ಇದಾಗಿದ್ದು, 200 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ದುಬೈಗೆ ಪ್ರಯಾಣ ಬೆಳೆಸಿತ್ತು. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೇಕ್ ಆಫ್ ಆದ ಕೆಲ ನಿಮಿಷಗಳಲ್ಲೇ ಮತ್ತೆ ಏರ್ ಪೋರ್ಟ್ ಗೆ ವಾಪಸ್ ಆಗಿದ್ದು, ತುರ್ತು ಭೂಸ್ಪರ್ಶ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular