ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ‘ವಾಟ್ಸಾಪ್’ ಈಗಾಗಲೇ ತನ್ನ ಬಳಕೆದಾರರಿಗೆ ಹಲವಾರು ವೈಶಿಷ್ಟ್ಯತೆಗಳನ್ನು ಪರಿಚಯಿಸಿದೆ. ಅಲ್ಲದೆ ಈಗಲೂ ಸಹ ಹೊಸ ಹೊಸ ಫೀಚರ್ಗಳನ್ನು ಬಿಡುಗಡೆ ಮಾಡುತ್ತಿದ್ದು ಬಳಕೆದಾರರ ಸ್ನೇಹಿಯಾಗಿದೆ.
ಇದೀಗ ಮತ್ತೊಂದು ಹೊಸ ಫೀಚರ್ ಪರಿಚಯಿಸಲು ವಾಟ್ಸಾಪ್ ಮುಂದಾಗಿದ್ದು, ಬಳಕೆದಾರರು ತಮ್ಮ ಚಾಟ್ ಮೆಸೇಜ್ ಗಳನ್ನು ಗೌಪ್ಯವಾಗಿಟ್ಟುಕೊಳ್ಳಬಹುದಾಗಿದೆ. ಇದಕ್ಕಾಗಿ ಲಾಕ್ ಸಿಸ್ಟಮ್ ಸೌಲಭ್ಯ ಒದಗಿಸುವ ಸಾಧ್ಯತೆ ಇದೆ.
ಈ ಹೊಸ ಫೀಚರ್ ಮೂಲಕ ಬಳಕೆದಾರರು ತಮ್ಮ ವೈಯಕ್ತಿಕ ಚಾಟ್ ಗಳನ್ನು ಲಾಕ್ ಮಾಡಿ ಬೇರೆಯವರಿಗೆ ಕಾಣಿಸದಂತೆ ಸಂರಕ್ಷಿಸಿ ಇಟ್ಟುಕೊಳ್ಳಬಹುದಾಗಿದೆ. ಇದಕ್ಕಾಗಿ ಫಿಂಗರ್ ಪ್ರಿಂಟ್ ಅಥವಾ ಪಾಸ್ ಕೋಡ್ ಸೌಲಭ್ಯ ನೀಡಲಾಗುತ್ತದೆ.