ಕಲ್ಲಿದ್ದಲು ತುಂಬಿದ ಟ್ರೇಲರ್ ವೇಗವಾಗಿ ಹರಿದು ಸ್ಥಳದಲ್ಲೇ ಮೃತಪಟ್ಟ ಬಾಲಕ; ಸ್ಥಳೀಯರ ಆಕ್ರೋಶ

ಮಧ್ಯಪ್ರದೇಶದ ಪಟ್ಟಣದ ರಸ್ತೆಗಳಲ್ಲಿ ಅತಿವೇಗದಲ್ಲಿ ಚಲಿಸುವ ಟ್ರೇಲರ್‌ಗಳ ಮೂಲಕ ಕಲ್ಲಿದ್ದಲು ಸಾಗಣೆಯನ್ನು ತಡೆಯಲು ಸಿಂಗ್ರೌಲಿ ಜಿಲ್ಲಾಡಳಿತದ ನಿರಂತರ ಪ್ರಯತ್ನಗಳ ಮಧ್ಯೆ ಅನಾಹುತ ನಡೆದಿದೆ.

ಸಿಂಗ್ರೌಲಿಯ ಝಲಾರಿ ಮಜೌಲಿ ಗ್ರಾಮದಲ್ಲಿ ವೇಗವಾಗಿ ಚಲಿಸುತ್ತಿದ್ದ ಟ್ರೇಲರ್ 17 ವರ್ಷದ ಬಾಲಕನ ಜೀವವನ್ನು ಬಲಿ ತೆಗೆದುಕೊಂಡಿದೆ. ಟ್ರೇಲರ್‌ ಅಪ್ರಾಪ್ತ ಬಾಲಕನ ಮೇಲೆ ಹರಿದ ನಂತರ ಸ್ಥಳೀಯರು ರಸ್ತೆ ತಡೆದು ಧರಣಿ ನಡೆಸಿದ್ದಾರೆ.

ಘಟನೆ ನಂತರ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಗ್ರಾಮಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದರು. ಆರೋಪಿ ಚಾಲಕನ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಟ್ರೇಲರ್‌ಗಳ ಮೂಲಕ ಅತಿವೇಗದಲ್ಲಿ ಸಂಚರಿಸುವ ಮತ್ತು ಹಲವಾರು ರಸ್ತೆ ಅಪಘಾತಗಳು ಮತ್ತು ಸಾವುಗಳಿಗೆ ಕಾರಣವಾಗುತ್ತಿರುವ ಕಲ್ಲಿದ್ದಲು ಸಾಗಣೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಹಲವು ಬಾರಿ ಚರ್ಚೆ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಚಾಲಕನನ್ನು ಹಿಡಿಯಲು ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್) ಶಿವಕುಮಾರ್ ವರ್ಮಾ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read