1988 ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಒಂದು ವರ್ಷ ಜೈಲು ಶಿಕ್ಷೆಗೊಳಗಾಗಿದ್ದ ಕ್ರಿಕೆಟಿಗ-ರಾಜಕಾರಣಿ ನವಜೋತ್ ಸಿಂಗ್ ಸಿಧು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
10 ತಿಂಗಳು ಜೈಲು ಶಿಕ್ಷೆಯನ್ನು ಬಹುತೇಕ ಪೂರ್ಣಗೊಳಿಸಿದ ನಂತರ ಶನಿವಾರ ಪಂಜಾಬ್‌ನ ಪಟಿಯಾಲಾ ಜೈಲಿನಿಂದ ಹೊರಬಂದರು.
ನವಜೋತ್ ಸಿಂಗ್ ಸಿಧುರನ್ನ ಜೈಲಿನ ಹೊರಗೆ ಹಲವಾರು ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರು ಭವ್ಯವಾಗಿ ಸ್ವಾಗತಿಸಿದರು.
ಬಿಡುಗಡೆಗೆ ಮುನ್ನ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದ್ದು, ಪಟಿಯಾಲಾ ಜೈಲಿನ ಹೊರಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದೇನೆ ಎಂದಿದ್ದರು.