ನರ್ತನದ ವೇಳೆಯೇ ಕುಸಿದು ಬಿದ್ದು ದೈವ ನರ್ತಕ ಸಾವು

ಇತ್ತೀಚಿನ ದಿನಗಳಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಹದಿಹರೆಯದವರು ಹಾಗೂ ಮಧ್ಯ ವಯಸ್ಕರು ಈ ರೀತಿ ಸಾವಿಗೀಡಾಗುತ್ತಿದ್ದು, ಇದೀಗ ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ದೋಳ್ಬಾಡಿ ಗ್ರಾಮದ ಇಡ್ಯಡ್ಕದಲ್ಲಿ ಗುರುವಾರ ಮುಂಜಾನೆ ಈ ಘಟನೆ ನಡೆದಿದ್ದು, ಎಡಮಂಗಲ ಗ್ರಾಮದ ಮಾಲೆಂಗ್ರಿ ನಿವಾಸಿ 57 ವರ್ಷದ ಕಾಂತು ಅಜಿಲ ಮೃತಪಟ್ಟವರಾಗಿದ್ದಾರೆ.

ಇಡ್ಯಡ್ಕದ 90 ಮನೆಗಳ ತರವಾಡು ದೈವಗಳ ವಾರ್ಷಿಕ ನೇಮೋತ್ಸವ ದೊಂಪದ ಬಲಿ ಕಾರ್ಯಕ್ರಮವನ್ನು ಏರ್ಪಡಿಸಿದ್ದ ವೇಳೆ ಶಿರಾಡಿ ದೈವಕ್ಕೆ ಕೋಲ ಕಟ್ಟಿರುವ ದೈವ ನರ್ತಕ ಕಾಂತು ಅಜಿಲ ನರ್ತನ ಸೇವೆಯಲ್ಲಿ ತೊಡಗಿರುವಾಗಲೇ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಕೂಡಲೇ ಸ್ಥಳದಲ್ಲಿದ್ದವರು ನೆರವಿಗೆ ಧಾವಿಸಿದರಾದರೂ ಅಷ್ಟರಲ್ಲಾಗಲೇ ಕೊನೆಯುಸಿರೆಳೆದಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read