ಮೋದಿ ಉಪನಾಮ ಹೇಳಿಕೆಯಿಂದ 2 ವರ್ಷ ಜೈಲು ಶಿಕ್ಷೆಗೊಳಗಾಗಿ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನ ರಾಹುಲ್ ಗಾಂಧಿ ವಿರುದ್ಧ ನೀರವ್ ಮೋದಿ ಪ್ರಕರಣ ದಾಖಲಿಸುವುದಾಗಿ ಗುಡುಗಿದ್ದಾರೆ.
ವಂಚನೆ ಆರೋಪದ ಮೇಲೆ ದೇಶದಿಂದ ಪಲಾಯನ ಮಾಡಿರುವ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ, ರಾಹುಲ್ ಗಾಂಧಿ ವಿರುದ್ಧ ಇಂಗ್ಲೆಂಡ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
ರ್ಯಾಲಿಯೊಂದರ ವೇಳೆ ರಾಹುಲ್ ಗಾಂಧಿ, “ಎಲ್ಲಾ ಕಳ್ಳರಿಗೆ ಮೋದಿ ಎಂಬ ಸಾಮಾನ್ಯ ಉಪನಾಮ ಹೇಗೆ ಬರುತ್ತದೆ?” ಎಂದು ಹೇಳಿದ್ದರು.
ತಮ್ಮ ಹೇಳಿಕೆಯಲ್ಲಿ, ರಾಹುಲ್ ಗಾಂಧಿ ಅವರು ಲಲಿತ್ ಮೋದಿ ಮತ್ತು ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಅವರನ್ನು ಉಲ್ಲೇಖಿಸಿದ್ದರು. ಇದಕ್ಕೆ ಕೆರಳಿರುವ ಲಲಿತ್ ಮೋದಿ ಇಂದು ಸರಣಿ ಟ್ವೀಟ್ ಮಾಡಿ ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಿಸೋದಾಗಿ ಎಚ್ಚರಿಸಿದ್ದಾರೆ.
ಅವನು ತನ್ನನ್ನು ತಾನು ಸಂಪೂರ್ಣವಾಗಿ ಮೂರ್ಖನಾಗುವುದನ್ನು ನೋಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಪ್ರತಿಯೊಬ್ಬ ಟಾಮ್ ಡಿಕ್ ಮತ್ತು ಗಾಂಧಿ ಸಹಚರರು ನಾನು ನ್ಯಾಯದಿಂದ ಪಲಾಯನ ಮಾಡುತ್ತಿದ್ದೇನೆ ಎಂದು ಮತ್ತೆ ಮತ್ತೆ ಹೇಳುತ್ತಿದ್ದಾರೆ. ಏಕೆ ? ಹೇಗೆ?” ಎಂದು ಟ್ವೀಟ್ಗಳ ಸರಣಿಯಲ್ಲಿ ಲಲಿತ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು