ಗಗನದಲ್ಲಿ ಕೆಲವೊಮ್ಮೆ ವಿಚಿತ್ರಗಳು ಗೋಚರವಾಗುತ್ತಿರುತ್ತವೆ. ಇಂತಹ ಒಂದು ವಿಚಿತ್ರ ಘಟನೆಯಲ್ಲಿ, ಮಾರ್ಚ್ 27 ರಂದು ಮಾಸ್ಕೋದ ಆಕಾಶದಲ್ಲಿ ಕಪ್ಪು ವೃತ್ತ ಕಂಡುಬಂದಿದೆ.
ಸ್ಥಳೀಯರ ಪ್ರಕಾರ ದೊಡ್ಡ ಕಪ್ಪು ವೃತ್ತವು ಆಕಾಶಕ್ಕೆ ಸ್ಥಿರವಾಗಿ ಏರುತ್ತಾ ಹೋಗುವುದಕ್ಕೂ ಮೊದಲು ದೊಡ್ಡ ಶಬ್ದ ಕೇಳಿಸಿದೆ.
ಸದ್ಯ ಇದೇ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವರ ಸಲಹೆಗಾರ ಆಂಟನ್ ಗೆರಾಶ್ಚೆಂಕೊ ಅವರು ಟ್ವಿಟರ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ.
“ಮಾಸ್ಕೋದ ನಿವಾಸಿಗಳು ನಗರದ ಆಕಾಶದಲ್ಲಿ ಕಂಡು ಬಂದ ಕಪ್ಪು ವೃತ್ತದ ವೀಡಿಯೊಗಳನ್ನು ಪ್ರಕಟಿಸಿದ್ದಾರೆ. ಅಲ್ಲಿ ಏನಾಯಿತೆಂದು ಎಂದು ನೀವು ಯೋಚಿಸುತ್ತೀರಾ?” ಎಂದು ಅವರು ವಿಡಿಯೋ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಜನಪ್ರಿಯ ಕ್ರೆಮ್ಲಿನ್ ಪರ ದಿನಪತ್ರಿಕೆಯಾಗಿರುವ ಇಜ್ವೆಸ್ಟಿಯಾ ಪ್ರಕಾರ, ಅಂತಹ ಕಪ್ಪು ಉಂಗುರಗಳು ಆಗಾಗ್ಗೆ ಕಂಡುಬರುತ್ತವೆ. ವಿಝಾರ್ಡ್ ಆಫ್ ಓಜ್‌ನಲ್ಲಿ “ಸರೆಂಡರ್ ಡೊರೊಥಿ” ಎಂದು ಬರೆಯಲು ಪಶ್ಚಿಮದ ವಿಕೆಡ್ ವಿಚ್ ಆಕಾಶದಲ್ಲಿ ಬಳಸಿದ ಬರವಣಿಗೆಯನ್ನು ನೆನಪಿಸುತ್ತದೆ ಎಂದು ಕೆಲವರು ತಮಾಷೆ ಮಾಡಿದ್ದಾರೆ. ಅಲ್ಲದೆ ಇದು UFO ಗಳಿಂದ ಉಂಟಾಗುತ್ತದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.