ಸೀರೆಯುಟ್ಟು ಫುಟ್ಬಾಲ್ ಆಡಲಾಗದು ಎಂದು ಯಾರು ಹೇಳಿದ್ದು ? ಸೀರೆ ಹಾಕಿಕೊಂಡರೆ ಅಷ್ಟು ಸಲೀಸಾಗಿ ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂಬ ಮಾತನ್ನು ಸುಳ್ಳಾಗಿಸಿದ್ದಾರೆ ಮಧ್ಯ ಪ್ರದೇಶದ ಗ್ವಾಲಿಯರ್‌ನ ಮಹಿಳೆಯರು.
ವೈರಲ್ ಆಗಿರುವ ಈ ವಿಡಿಯೋವನ್ನು ಪತ್ರಕರ್ತ ಬ್ರಜೇಶ್ ರಜ್ಪೂತ್ ಶೇರ್ ಮಾಡಿದ್ದು, 3.5 ಸಾವಿರ ವೀಕ್ಷಣೆಗಳನ್ನು ಕಂಡಿದೆ. “ಮಹಿಳೆಯರು ಮೆಸ್ಸಿಗಿಂತ ಕಡಿಮೆಯೇ…… ಸೀರೆಯುಟ್ಟ ಮಹಿಳೆಯರು ಗ್ವಾಲಿಯರ್‌ನಲ್ಲಿ ಫುಟ್ಬಾಲ್ ಆಡಿದ್ದಾರೆ,” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
’ಗೋಲ್ ಇನ್ ಸ್ಯಾರೀ’ ಹೆಸರಿನ ವಿಶಿಷ್ಟ ಕ್ರೀಡಾಕೂಟದ ವೇಳೆ ಈ ಪಂದ್ಯವನ್ನು ಆಡಲಾಗಿದೆ. ಈ ಕೂಟವನ್ನು ಗ್ವಾಲಿಯರ್ ನಗರ ಪಾಲಿಕೆ ಹಾಗೂ ಎನ್‌ಜಿಓ ಒಂದು ಸಹಯೋಗದಲ್ಲಿ ಆಯೋಜಿಸಿದ್ದವು. ಅಗ್ರ ಮೂರು ತಂಡಗಳು ಟ್ರೋಫಿಗಳನ್ನು ಸ್ವೀಕರಿಸಿದ್ದು, ಪ್ರತಿ ತಂಡದ ಸದಸ್ಯರಿಗೂ ವಿಶೇಷ ಉಡೊಗೊರೆಗಳನ್ನು ನೀಡಲಾಗಿದೆ.
20-72ರ ವಯೋಮಾನದ ಮಹಿಳೆಯರು ಕೂಟದಲ್ಲಿ ಭಾಗಿಯಾಗಿದ್ದರು. 72ರ ಹರೆಯದ ದಲ್ಜೀತ್ ಸಿಂಗ್ ಮಾನ್ ಈ ಫುಟ್ಬಾಲ್ ಟೂರ್ನಿಯಲ್ಲಿ ಭಾಗಿಯಾದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.
https://twitter.com/brajeshabpnews/status/1640184794784083969?ref_src=twsrc%5Etfw%7Ctwcamp%5Etweetembed%7Ctwterm%5E1640184794784083969%7Ctwgr%5Ee551412435fe53000d461d8addfb681993114062%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fgoal-in-saree-gwalior-women-play-football-in-sarees-video-goes-viral