ಬೈಕ್ ಸವಾರಿ ವೇಳೆಯೇ ವಾಹನದಲ್ಲಿ ಹಾವು ಕಂಡಿದ್ದು ಬೈಕ್ ಸವಾರ ಬೆಚ್ಚಿಬಿದ್ದಿದ್ದಾರೆ. ಬುಂದೇಲ್ ಖಂಡದಲ್ಲಿ ನಡೆದ ಈ ಘಟನೆಯ ಫೋಟೋ ವೈರಲ್ ಆಗಿದ್ದು ಎದೆನಡುಗಿಸಿದೆ.
ಬುಂದೇಲ್‌ಖಂಡ್‌ನ ಸಾಗರ್‌ನಿಂದ ಈ ಘಟನೆ ಬೆಳಕಿಗೆ ಬಂದಿದ್ದು, ವಾಹನ ಸವಾರ ತನ್ನ ಬೈಕ್‌ನಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ವಾಹನದಿಂದ ಬಲವಾದ ಹಿಸ್ಸಿಂಗ್ ಶಬ್ದ ಕೇಳಿಸಿತು. ಆತ ಹೆದರಿ ತಕ್ಷಣ ರಸ್ತೆ ಬದಿ ಬೈಕ್ ನಿಲ್ಲಿಸಿ ಪಕ್ಕಕ್ಕೆ ನಿಂತು ನೋಡಿದಾಗ ನಾಗರಹಾವು ಬೈಕ್‌ನಿಂದ ಹೊರಗಡೆ ಬಂದು ದಾಳಿ ಮಾಡಲು ಮುಂದಾಯಿತು.
ಬೈಕ್ ನಲ್ಲಿದ್ದ ನಾಗರ ಹಾವನ್ನು ಕಂಡು ಸಾಕಷ್ಟು ಪ್ರಯಾಣಿಕರು ಭಯಭೀತರಾಗಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಳಿಸಿದರು.
ಬೈಕ್ ಮಾಲೀಕರು ನಾಗರಹಾವನ್ನು ಹೊರತೆಗೆಯಲು ವಿಫಲವಾದ ನಂತರ, ಅವರು ಬುಂದೇಲ್‌ಖಂಡ್‌ನ ಪ್ರಸಿದ್ಧ ಹಾವು ಹಿಡಿಯುವ ಅಕಿಲ್ ಬಾಬಾ ಅವರಿಗೆ ಮಾಹಿತಿ ನೀಡಿದ್ದು, ಅಖಿಲ್ ಸ್ಥಳಕ್ಕಾಗಮಿಸಿ ಕೆಲವೇ ನಿಮಿಷಗಳಲ್ಲಿ ನಾಗರ ಹಾವನ್ನು ಹೊರತೆಗೆದರು. ನಂತರ ನಾಗರಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.