ಕುಸಿದ ಚಿನ್ನದ ಗಣಿಯೊಂದರ ಅವಶೇಷಗಳಡಿಯಿಂದ ಮೇಲೆದ್ದು ಬರುತ್ತಿರುವ ಕಾಂಗೋಲೀಸ್ ಗಣಿಗಾರರು ಇಳಿಜಾರೊಂದನ್ನು ವಿಡಿಯೋವೊಂದು ವೈರಲ್ ಆಗಿದೆ.
ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಈ ರೀತಿಯ ಅವಘಡಗಳು ಸರ್ವೇಸಾಮಾನ್ಯ. ದೇಶದ ದಕ್ಷಿಣ ಕಿವು ಪ್ರಾಂತ್ಯದಲ್ಲಿ ಭಾರೀ ಮಳೆಯ ಕಾರಣ ಈ ಅನಾಹುತ ಸಂಭವಿಸಿತ್ತು. ಅವಶೇಷಗಳಡಿ ಇಳಿಜಾರೊಂದರಲ್ಲಿ ಸಿಲುಕಿದ ಗಣಿಗಾರರೊಬ್ಬರು ಗುದ್ದಲಿಯೊಂದರಲ್ಲಿ ತಮ್ಮ ಸುತ್ತಲಿನ ಮಣ್ಣನ್ನು ಅಗೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ನೋಡ ನೋಡುತ್ತಲೇ ಅವಶೇಷಗಳಡಿಯಿಂದ ಹೊರಬರುವ ಈ ಗಣಿಗಾರ ಇಳಿಜಾರಿನ ಕೆಳಗೆ ಜಾರಿಕೊಂಡು ಸುರಕ್ಷತೆಯತ್ತ ಧಾವಿಸುತ್ತಾರೆ. ಹೀಗೆ ಹೊರಬಂದ ಗಣಿಗಾರ ತನ್ನಂತೆಯೇ ಅಲ್ಲಿ ಸಿಲುಕಿದ್ದ ಇನ್ನೂ ಎಂಟು ಮಂದಿಯನ್ನು ಎರಡು ನಿಮಿಷಗಳ ಒಳಗೆ ಕಾಪಾಡಿದ್ದಾರೆ.
ಸುರಕ್ಷತಾ ಮಾನದಂಡಗಳನ್ನು ಪಾಲಿಸದೇ ಇರುವ ಕಾರಣ ಕಾಂಗೋಲೀಸ್ ಗಣಿಗಳ ಸುರಂಗಗಳಲ್ಲಿ ಈ ರೀತಿಯ ಅವಘಡಗಳು ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಹೀಗೆ ಭೂಮಿಯಾಳದಲ್ಲಿ ಸಿಲುಕುವ ಗಣಿಗಾರರು ಅಲ್ಲಿಂದ ಪಾರಾಗಿ ಬರುವ ಸಾಧ್ಯತೆಗಳು ಬಹಳ ವಿರಳ.