alex Certify ಸರ್ಕಾರಿ ಬಂಗಲೆ ತೊರೆಯಲು ರಾಹುಲ್‌ ಗಾಂಧಿಗೆ ನಿರ್ದೇಶನ ಬಂದ ಬೆನ್ನಲ್ಲೇ ಬಂತು ಈ ಆಹ್ವಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಬಂಗಲೆ ತೊರೆಯಲು ರಾಹುಲ್‌ ಗಾಂಧಿಗೆ ನಿರ್ದೇಶನ ಬಂದ ಬೆನ್ನಲ್ಲೇ ಬಂತು ಈ ಆಹ್ವಾನ….!

ದೆಹಲಿಯ ಲುಟ್ಯೆನ್ಸ್‌ನಲ್ಲಿರುವ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡುವಂತೆ ರಾಹುಲ್ ಗಾಂಧಿ ಅವರಿಗೆ ಸೂಚಿಸಿದ ಬೆನ್ನಲ್ಲೇ ತೆಲಂಗಾಣ ಕಾಂಗ್ರೆಸ್‌ನ ಮುಖ್ಯಸ್ಥ ರೇವಂತ್ ರೆಡ್ಡಿ, ರಾಹುಲ್ ಗಾಂಧಿಯನ್ನು ತಮ್ಮ ಮನೆಯಲ್ಲಿ ಉಳಿಯಲು ಆಹ್ವಾನಿಸಿದ್ದಾರೆ.

ರಾಹುಲ್ ಭಯ್ಯಾ, ನನ್ನ ಮನೆ ನಿಮ್ಮ ಮನೆಯಿದ್ದಂತೆ. ನಾನು ನಿಮ್ಮನ್ನು ನನ್ನ ಮನೆಗೆ ಸ್ವಾಗತಿಸುತ್ತೇನೆ. ನಾವು ಕುಟುಂಬ, ಇದು ನಿಮ್ಮ ಮನೆ ಕೂಡ ಎಂದು ರೇವಂತ್ ರೆಡ್ಡಿ ಟ್ವೀಟ್ ಮಾಡಿ ಕಾಹುಲ್ ಗಾಂಧಿಯನ್ನ ತಮ್ಮ ಮನೆಗೆ ಆಹ್ವಾನಿಸಿದ್ದಾರೆ.

ಸಂಸತ್ ಸದಸ್ಯರಾಗಿದ್ದ ವೇಳೆ ಇದ್ದ ಮನೆಯನ್ನು ತೊರೆಯುವಂತೆ ಸೂಚಿಸಿದ್ದ ಲೋಕಸಭಾ ಸಚಿವಾಲಯಕ್ಕೆ ರಾಹುಲ್ ಉತ್ತರಿಸಿದ ಪತ್ರವನ್ನು ರೇವಂತ್ ರೆಡ್ಡಿ ಹಂಚಿಕೊಂಡು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಸಂಸತ್ ಸದಸ್ಯರಾಗಿ ಕೇರಳದ ವಯನಾಡ್ ಅನ್ನು ಪ್ರತಿನಿಧಿಸಿದ್ದ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ನಂತರ ತಮ್ಮ ಬಂಗಲೆಯನ್ನು ಖಾಲಿ ಮಾಡುವಂತೆ ಕೇಳಲಾಗಿದೆ.

ಸೂರತ್‌ನ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರನ್ನು ಅಪರಾಧಿ ಎಂದು ಘೋಷಿಸಿದ ನಂತರ ಅವರನ್ನು ಅನರ್ಹಗೊಳಿಸಲಾಯಿತು. ಮೋದಿ ಉಪನಾಮದ ಬಗ್ಗೆ ನೀಡಿದ ಹೇಳಿಕೆಗಾಗಿ ರಾಹುಲ್ ಗಾಂಧಿ 2 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...