ಪೋಷಕರ ಸಾವಿನಿಂದ ಆಘಾತ; ಕಟ್ಟಡದಿಂದ ಜಿಗಿದ ನೈಜೀರಿಯಾ ಮೂಲದ ವ್ಯಕ್ತಿ

ದೆಹಲಿಯಲ್ಲಿನ ಮನೆ ಕಟ್ಟಡದ ಎರಡನೇ ಮಹಡಿಯಿಂದ ನೈಜೀರಿಯಾದ ವ್ಯಕ್ತಿಯೊಬ್ಬ ಜಿಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕ್ಲಿಪ್‌ನಲ್ಲಿ 37 ವರ್ಷದ ಎನ್ಡಿನೊಜುವೊ ಎಂದು ಗುರುತಿಸಲಾದ ವ್ಯಕ್ತಿ ದೆಹಲಿಯ ನಿಹಾಲ್ ವಿಹಾರ್ ಪ್ರದೇಶದ ವಸತಿ ಕಟ್ಟಡದ 2 ನೇ ಮಹಡಿಯಲ್ಲಿ ತೂಗಾಡುತ್ತಿರುವಾಗ ಕೂಗುತ್ತಿರುವುದು ಕಂಡುಬಂದಿದೆ. ಒಂದು ಹಂತದಲ್ಲಿ ಹಿಡಿತವನ್ನು ಕಳೆದುಕೊಂಡ ಆತ ಕೆಳಗೆ ಬೀಳುತ್ತಾನೆ.

ಘಟನೆ ಮಾರ್ಚ್ 18 ರಂದು ನಡೆದಿದ್ದು ಪ್ರತ್ಯಕ್ಷದರ್ಶಿಗಳ ಪ್ರಕಾರ ಎನ್ಡಿನೊಜುವೊ ಕಟ್ಟಡದಿಂದ ಬಿದ್ದ ನಂತರ ಓರ್ವ ವ್ಯಕ್ತಿ ತಕ್ಷಣ ಅವನಿಗೆ ಸಹಾಯ ಮಾಡಲು ಓಡಿ ಬರುತ್ತಾನೆ. ಈ ವೇಳೆ ಆತನನ್ನು ಹಿಡಿದುಕೊಂಡ ಎನ್ಡಿನೊಜುವೊ ಆತನನ್ನು ಬಿಡಲು ನಿರಾಕರಿಸುತ್ತಾನೆ.

ನೈಜೀರಿಯನ್ ಪ್ರಜೆಯ ಹಿಡಿತದಿಂದ ತನ್ನನ್ನು ಬಿಡಿಸಿಕೊಳ್ಳಲು ಸಹಾಯಕ್ಕೆ ಹೋದವನು ಹೆಣಗಾಡುತ್ತಿರುವುದನ್ನು ವೈರಲ್ ವಿಡಿಯೋ ತೋರಿಸಿದೆ.

ಈ ಸಮಯದಲ್ಲಿ ಅವರನ್ನು ಸುತ್ತುವರೆದಿರುವ ಜನರು ಆ ವ್ಯಕ್ತಿಗೆ ಸಹಾಯ ಮಾಡಲು ವಿದೇಶಿಗನನ್ನು ಕೋಲುಗಳಿಂದ ಥಳಿಸುವುದು ಸಹ ಕಂಡುಬರುತ್ತದೆ.

ನೈಜೀರಿಯಾ ಪ್ರಜೆಯನ್ನು ನಂತರ ಪೊಲೀಸರು ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ಕರೆದೊಯ್ದರು. ಎನ್ಡಿನೋಜುವೊ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರ ಕಾಲಿಗೆ ಮೂಳೆ ಮುರಿತವಾಗಿದೆ.

ನೈಜೀರಿಯಾದಲ್ಲಿ ತನ್ನ ಹೆತ್ತವರ ಸಾವಿನ ಬಗ್ಗೆ ತಿಳಿದ ನಂತರ ತಾನು ಕಟ್ಟಡದಿಂದ ಜಿಗಿದಿದ್ದೇನೆ ಎಂದು ಪೊಲೀಸರಿಗೆ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದಾನೆ. ದುರಂತದ ಸುದ್ದಿ ತಿಳಿದ ನಂತರ ಆತ ಆಘಾತ ಮತ್ತು ಖಿನ್ನತೆಗೆ ಒಳಗಾಗಿದ್ದಾಗಿ ಹೇಳಿದ್ದಾನೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read