alex Certify ಆಗಸದಲ್ಲಿ ಅರೋರಾ ಬೋರಿಯಾಲಿಸ್‌ ಬಿಡಿಸಿದ ವರ್ಣವೈಭವ; ಚಿತ್ರಗಳನ್ನು ಶೇರ್‌ ಮಾಡಿಕೊಂಡು ಸಂಭ್ರಮಿಸಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸದಲ್ಲಿ ಅರೋರಾ ಬೋರಿಯಾಲಿಸ್‌ ಬಿಡಿಸಿದ ವರ್ಣವೈಭವ; ಚಿತ್ರಗಳನ್ನು ಶೇರ್‌ ಮಾಡಿಕೊಂಡು ಸಂಭ್ರಮಿಸಿದ ನೆಟ್ಟಿಗರು

ಅರೋರಾಗಳನ್ನು ವೀಕ್ಷಿಸುವುದು ಪ್ರತಿಯೊಬ್ಬ ವಿಜ್ಞಾನಾಸಕ್ತನ ಕನಸು. ಈ ಅರೋರಾಗಳ ಪೈಕಿ ತೆಂಕಣ ಬೆಳಕು ತನ್ನ ವರ್ಣಚಿತ್ತಾರಗಳಿಂದ ಆಗಸವನ್ನು ಭರಿಸುವ ಅದ್ಭುತವನ್ನು ನೋಡಲು ಉತ್ತರ ಅಮೆರಿಕಾದ ಕೆನಡಾ ಹಾಗೂ ಅಮೆರಿಕಾಗೆ ಹೋಗಬೇಕು.

ಅರೋರಾ ಬೋರಿಯಾಲಿಸ್ ಎಂದೂ ಕರೆಯಲ್ಪಡುವ ಈ ತೆಂಕಣ ಬೆಳಕಿನ ಚಿತ್ತಾರ ವೈಭವವು ಮಾರ್ಚ್ 23ರಂದು ಕ್ಯಾಲಿಫೋರ್ನಿಯಾದಿಂದ ಕೆನಡಾದವರೆಗೂ ಆಗಸವನ್ನು ಹಸಿರು, ನಸುಗೆಂಪು ಹಾಗೂ ನೇರಳೆ ಬಣ್ಣದಲ್ಲಿ ಮಿಂದೇಳಿಸಿದೆ.

ನಾರ್ದನ್ ಲೈಟ್ಸ್‌ನ ದೃಶ್ಯಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅವುಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ಲಾಸ್ ಏಂಜಲೀಸ್‌-ಫೀನಿಕ್ಸ್‌ ನಡುವಿನ ವಿಮಾನದಲ್ಲಿದ್ದ ವೇಳೆ ತಮ್ಮ ಕಣ್ಣಿಗೆ ಗೋಚರಿಸಿದ ಅರೋರಾದ ದೃಶ್ಯವೈಭವದ ಚಿತ್ರಗಳನ್ನು ಸೆರೆ ಹಿಡಿದ ಡಕೋಟಾ ಸ್ನೈಡರ್‌ ಹೆಸರಿನ ನೆಟ್ಟಿಗರೊಬ್ಬರು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಮಿನಸೋಟಾದ ಉತ್ತರ ಕರಾವಳಿಯಲ್ಲಿ ನಿಂತು ಅರೋರಾ ವೀಕ್ಷಣೆ ಮಾಡಿದ ಸಂದರ್ಭದ ಕ್ಷಣಗಳನ್ನು ಹಂಚಿಕೊಂಡಿರುವ ಜೇಕ್ ಹೆಯ್ಟ್‌ಮನ್, “ಕಳೆದ ರಾತ್ರಿ ಅದ್ಭುತವಾದದ್ದು. ಅರೋರಾ ಬೋರಿಯಾಲಿಸ್ ಸ್ಮರಣೀಯ ಪ್ರದರ್ಶನವನ್ನು ನಮ್ಮ ಮುಂದೆ ಇಟ್ಟಿತ್ತು.  ಮಿನಸೋಟಾದ ಉತ್ತರ ಕರಾವಳಿಯ ಹಾಲೋ ರಾಕ್‌ನಿಂದ ಸೆರೆ ಹಿಡಿದ ಮೂರು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಇಂಥ ಅರೋರಾವನ್ನು ಹಿಂದೆಂದೂ ಕಂಡಿರಲಿಲ್ಲ,” ಎಂದು ಹೇಳಿಕೊಂಡಿದ್ದಾರೆ.

ರಾಷ್ಟ್ರೀಯ ಹವಾಮಾನ ಸೇವೆಯ ವಿವಿಧ ರಾಜ್ಯಗಳ ಅಂಗಗಳು ಸಹ ತಂತಮ್ಮ ಅಧಿಕೃತ ಟ್ವಿಟರ್‌ ಖಾತೆಗಳ ಮೂಲಕ ಅರೋರಾ ಪ್ರಕ್ರಿಯೆಯ ವಿವಿಧ ಆಯಾಮಗಳ ಚಿತ್ರಗಳನ್ನು ಶೇರ್‌ ಮಾಡಿಕೊಂಡಿವೆ.

— Dakota Snider (@dakotasnider) March 24, 2023

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...