ಇದು ಡಿಜಿಟಲ್ ಯುಗ. ಜನರು ದಿನದಲ್ಲಿ ಎಂಟಕ್ಕಿಂತ ಹೆಚ್ಚು ಗಂಟೆ ಕಂಪ್ಯೂಟರ್ ಮುಂದೆ ಕಳೆಯುತ್ತಾರೆ. ಇದ್ರಿಂದ ಕಣ್ಣಿನ ಸಮಸ್ಯೆ ಕಾಡುತ್ತದೆ. ಆರಂಭದಲ್ಲಿ ಕಣ್ಣು ನೋವು, ಉರಿ ಕಾಣಿಸಿಕೊಳ್ಳುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ.
ಹಾಗಂತ ಕೆಲಸ ಬಿಟ್ಟು ಕುಳಿತುಕೊಳ್ಳಲು ಸಾಧ್ಯವಿಲ್ಲ. ಅದ್ರ ಬದಲು ಕಂಪ್ಯೂಟರ್ ಬಳಕೆಯ ವೇಳೆ ಕೆಲವೊಂದು ವಿಶ್ರಾಂತಿ ನಿಯಮಗಳನ್ನು ಪಾಲಿಸಿದ್ರೆ ನಿಮ್ಮ ಕಣ್ಣಿನ ರಕ್ಷಣೆಯನ್ನು ನೀವೇ ಮಾಡಿಕೊಳ್ಳಬಹುದು.
ಕಂಪ್ಯೂಟರ್ ಸ್ಕ್ರೀನ್ ದೊಡ್ಡದು ಮಾಡಿಕೊಂಡು ಕಂಪ್ಯೂಟರ್ ಬಳಸಿ. ಆಗ ಆರಾಮವಾಗಿ ಕಂಪ್ಯೂಟರ್ ನಲ್ಲಿ ಬರುವ ಅಕ್ಷರ, ಸಂಖ್ಯೆಗಳನ್ನು ಓದಬಹುದು.
ನಿರಂತರವಾಗಿ ಕಂಪ್ಯೂಟರ್ ಸ್ಕ್ರೀನ್ ನೋಡುವ ನೀವು ಕಣ್ಣು ಮಿಟುಕಿಸುವುದನ್ನು ಮರೆತುಬಿಡ್ತೀರಾ. ಇದ್ರಿಂದ ಕಣ್ಣು ಒಣಗುತ್ತದೆ. ಆಗಾಗ ಐ ಡ್ರಾಪ್ ಕಣ್ಣಿಗೆ ಹಾಕುತ್ತಿದ್ದರೆ ರಿಲಾಕ್ಸ್ ಅನುಭವ ಪಡೆಯಬಹುದು.
ಕಂಪ್ಯೂಟರ್ ಸ್ಕ್ರೀನ್ ಬ್ರೈಟ್ ಆಗಿದ್ದರೂ ಕಣ್ಣು ನೋವು, ತಲೆ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸಮಯ ಸಮಯಕ್ಕೆ ಕಂಪ್ಯೂಟರ್ ಪರದೆ ಬೆಳಕನ್ನು ಅಡ್ಜೆಸ್ಟ್ ಮಾಡಿ.
ಸತತ 20 ನಿಮಿಷ ಕಂಪ್ಯೂಟರ್ ಪರದೆ ನೋಡ್ತಾ ಇದ್ದಲ್ಲಿ 20 ಸೆಕೆಂಡ್ ಬೇರೆ ಕಡೆ ನೋಡಿ. ಇದ್ರಿಂದ ನಿಮ್ಮ ಕಣ್ಣುಗಳ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ.