ಮ್ಯಾಜಿಕ್ ಅನ್ನೋದೆ ಕೈ ಚಳಕ, ಮನಸ್ಸಲ್ಲಿ ಭ್ರಮೆ ಹುಟ್ಟಿಸುವಂತಹ ಕಲೆ. ವಾಸ್ತವವಾಗಿ ಕೆಲ ಟ್ರಿಕ್‌ಗಳನ್ನ ಉಪಯೋಗಿಸಿ ಮಾಡುವಂತ ಅದ್ಭುತ ಕಲೆ ಇದಾಗಿದೆ. ಇದೇ ರೀತಿಯ ಮ್ಯಾಜಿಕ್ ಒಂದರ ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ. ಈ ವಿಡಿಯೋ ನೋಡಿದವರೆಲ್ಲರೂ ಅದ್ದೇಗೆ ಸಾಧ್ಯವಾಯಿತು ಅಂತ ಶಾಕ್ ಆಗಿದ್ದಾರೆ.
ಅಷ್ಟಕ್ಕೂ ಈ ವಿಡಿಯೋದಲ್ಲಿ ನೀವು ಗಮನಿಸುವ ಹಾಗೆ, ಮ್ಯಾಜಿಕ್ ಮಾಡುವವನು ಹಾಗೂ ಯುವತಿಯೊಬ್ಬಳು ಒಬ್ಬರ ಮುಂದೆ ಇನ್ನೊಬ್ಬರು ನಿಂತಿರುತ್ತಾರೆ. ಅವರ ಮಧ್ಯೆ ಟೇಬಲ್ ನ್ನ ಇಟ್ಟಿರುತ್ತಾರೆ. ಆತ ಆ ಯುವತಿಗೆ ಕೈ ಮುಂದಕ್ಕೆ ಚಾಚಲು ಹೇಳುತ್ತಾನೆ. ಆತ ಹೇಳಿದಂತೆ ಆಕೆ ಕೈಯನ್ನ ಮುಂದೆ ಚಾಚುತ್ತಾಳೆ. ಆಗ ಆಕೆಯ ಕೈಯ ನೆರಳು ಆ ಟೇಬಲ್ ಮೇಲೆ ಬಿದ್ದಿರುತ್ತೆ. ಇದು ಕ್ಯಾಮರಾದಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಆಗಿರುತ್ತೆ.
ಆ ನಂತರ ಆತ ಆಕೆಯ ಕೈ ಬೆರಳುಗಳನ್ನ ಹಿಡಿದು ಕೊಂಚ ಮುಂದಕ್ಕೆ ಎಳೆಯುತ್ತಾನೆ. ಆಕೆ ಏನಾಗ್ತಿದೆ ಅಂತ ದಿಟ್ಟಿಸಿಕೊಂಡು ನೋಡ್ತಿರ್ತಾಳೆ. ಆ ನಂತರ ಆತ ಆಕೆಯ ಕೈ ಹಿಂದಕ್ಕೆ ತೆಗೆದುಕೊಳ್ಳುವಂತೆ ಹೇಳುತ್ತಾನೆ. ಆಕೆ ತನ್ನ ಎರಡು ಕೈಗಳನ್ನ ತಕ್ಷಣವೇ ಹಿಂದಕ್ಕೆ ತೆಗೆದುಕೊಳ್ತಾಳೆ. ಆದರೆ ಆ ಕ್ಷಣದಲ್ಲಿ ಆಕೆಯ ಕೈ ನೆರಳು ಮಾತ್ರ ಟೇಬಲ್ ಮೇಲೆಯೇ ಸ್ಥಿರವಾಗಿರುತ್ತೆ. ಕೆಲ ಕ್ಷಣದ ನಂತರ ಅದೂ ಮಾಯವಾಗುತ್ತೆ. ಆ ಸಮಯದಲ್ಲಿ ಆಕೆ ಬೆಚ್ಚಿಬಿದ್ದಿರುವ ರೀತಿ ನೋಡ್ತಿದ್ರೆ ಗೊತ್ತಾಗುತ್ತೆ, ಆಕೆ ಎಷ್ಟು ಶಾಕ್ ಆಗಿದ್ದಾಳೆ ಅಂತ. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ನೋಡಿ ಅನೇಕರು ಕಾಮೆಂಟ್ ಹಾಕಿದ್ದಾರೆ. ಒಬ್ಬರು ತುಂಬಾ ಅದ್ಭುತವಾಗಿದೆ ಈ ಟ್ರಿಕ್’ ಎಂದಿದ್ದಾರೆ. ಇನ್ನೊಬ್ಬರು, ‘ಇದು ಕತ್ತಲು ಬೆಳಕಿನ ಆಟ’ ಎಂದು ಹೇಳಿದ್ದಾರೆ. ಮಗದೊಬ್ಬರು ‘ಇದರ ಹಿಂದೆ ವೈಜ್ಞಾನಿಕ ಕಾರಣ ಇದೆ’ ಎಂದಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಈ ವಿಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ.
https://twitter.com/TopVideosOnly/status/1638888341361029126?ref_src=twsrc%5Etfw%7Ctwcamp%5Etweetembed%7Ctwterm%5E1638888341361029126%7Ctwgr%5E07127518c7a6aa070cac631cdc74efd43b5041ea%7Ctwcon%5Es1_&ref_url=https%3A%2F%2Fwww.india.com%2Fviral%2Fviral-magician-separates-womans-shadow-from-her-body-terrifying-video-5962361%2F