ಮಂಡ್ಯ ಜಿಲ್ಲೆಯ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಗೆ ಹೊಸ ಸಂವತ್ಸರದ ಪ್ರಥಮ ತೆಪ್ಪೋತ್ಸವವನ್ನು ಶುಕ್ರವಾರ ರಾತ್ರಿ ಸಡಗರ ಸಂಭ್ರಮದೊಂದಿಗೆ ವಿಜೃಂಭಣೆಯಿಂದ ನೆರವೇರಿಸಲಾಗಿದೆ.
ತೆಪ್ಪೋತ್ಸವದ ಅಂಗವಾಗಿ ಕಲ್ಯಾಣಿಯ ಸುತ್ತ ಆಕರ್ಷಕ ದೀಪಾಲಂಕಾರ ಮಾಡಲಾಗಿದ್ದು, ಪುಷ್ಪಾಲಂಕಾರದ ಮಂಟಪದ ಮಧ್ಯೆ ಇದ್ದ ಚೆಲುವನಾರಾಯಣ ಸ್ವಾಮಿಯನ್ನು ಕಲ್ಯಾಣಿಯ ಸುತ್ತ ಮೂರು ಪ್ರದಕ್ಷಿಣೆಗಳನ್ನು ಮಾಡಲಾಗಿದೆ.
ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತ ವೃಂದ ಚೆಲುವನಾರಾಯಣ ಸ್ವಾಮಿಯ ಭವ್ಯವಾದ ಈ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದಾರೆ. ಸಂಜೆ 6:30ಕ್ಕೆ ಆರಂಭಗೊಂಡ ತೆಪ್ಪೋತ್ಸವ ಕಾರ್ಯಕ್ರಮ ರಾತ್ರಿ 9:00 ಗಂಟೆ ಸುಮಾರಿಗೆ ಪೂರ್ಣಗೊಂಡಿದೆ.