ಸೀನು ಒಂದು ನೈಸರ್ಗಿಕ ಪ್ರತಿಕ್ರಿಯೆ. ಆದ್ರೆ ಒಂದು ಸೀನು ಬಂದ್ರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೀನು ಅಶುಭವಲ್ಲ ಶುಭ. ಆದ್ರೆ ಸಮಯ ಇಲ್ಲಿ ಮಹತ್ವ ಪಡೆಯುತ್ತದೆ. ಪ್ರಾಚೀನ ಕಾಲದಿಂದಲೂ ಸೀನಿನ ಬಗ್ಗೆ ಬೇರೆ ಬೇರೆ ಗ್ರಹಿಕೆಗಳಿವೆ. ನಿಮ್ಮನ್ನು ಶ್ರೀಮಂತ ಇಲ್ಲ ಬಡವನನ್ನಾಗಿ ಮಾಡುವ ಶಕ್ತಿ ಸೀನಿಗಿದೆ.
ಹೊಸ ಬಟ್ಟೆ ಧರಿಸುವ ವೇಳೆ ಸೀನು ಬಂದ್ರೆ ನಿಮ್ಮ ಕಪಾಟಿಗೆ ಇನ್ನಷ್ಟು ಹೊಸ ಬಟ್ಟೆ ಬಂದು ಸೇರಲಿದೆ ಎಂದರ್ಥ.
ಅವಶ್ಯವಾದ ಕೆಲಸದ ಮೇಲೆ ಹೊರಗೆ ಹೋಗ್ತಿರುವ ವೇಳೆ ಯಾರಾದ್ರೂ ಸೀನಿದ್ರೆ ಅದು ಅಶುಭವೆನ್ನಲಾಗುತ್ತದೆ. ಆದ್ರೆ ಇದು ಸುಳ್ಳು.
ಒಳ್ಳೆಯ ಕೆಲಸ ಮಾಡುವ ವೇಳೆ ಸೀನು ಬಂದ್ರೆ ಅಶುಭ. ಆದ್ರೆ ಎರಡು ಸೀನು ಬಂದ್ರೆ ಅದು ಮಂಗಳ ಸೂಚಕ.
ರೋಗಿಗೆ ಔಷಧಿ ಸೇವಿಸುವ ವೇಳೆ ಸೀನು ಬಂದ್ರೆ ಆತ ಆದಷ್ಟು ಬೇಗ ಗುಣಮುಖನಾಗ್ತಾನೆನ್ನುವ ಸಂಕೇತ.
ಊಟದ ವೇಳೆ ಸೀನು ಬಂದ್ರೆ ಒಳ್ಳೆಯ ಊಟ ಸಿಗುತ್ತದೆ ಎಂದರ್ಥ.
ಮಲಗುವ ವೇಳೆ ಹಾಗೂ ಎದ್ದ ತಕ್ಷಣ ಸೀನು ಕೇಳೋದು ಅಶುಭ.
ಹೊಸ ವಸ್ತು ಅಥವಾ ಹೊಸ ಮನೆ ಪ್ರವೇಶದ ವೇಳೆ ಸೀನು ಬರುವುದು ಒಳ್ಳೆಯದಲ್ಲ. ಆದ್ರೆ ವ್ಯಾಪಾರ ಶುರು ಮಾಡುವ ವೇಳೆ ಸೀನು ಬಂದ್ರೆ ಶುಭವೆಂದು ಪರಿಗಣಿಸಲಾಗಿದೆ.
ನಿಮ್ಮ ಹಿಂದೆ ಅಥವಾ ಎಡ ಭಾಗದಲ್ಲಿ ಸೀನಿದ್ರೆ ಒಳ್ಳೆಯ ಸಂಕೇತ.
ನಿಮ್ಮ ಮುಂದೆ ಯಾರಾದ್ರೂ ಸೀನಿದ್ರೆ ಸದ್ಯದಲ್ಲಿಯೇ ಜಗಳ ನಿಶ್ಚಿತ ಎಂದರ್ಥ.