ನಮ್ಮ ದೇಶ ಮುನ್ನಡೆಯುತ್ತಿದೆ ಎಂದು ನಾವೆಷ್ಟೇ ಹೇಳಿದರೂ ಸಹ ನಿರುದ್ಯೋಗದ ಸಮಸ್ಯೆ ಮಾತ್ರ ಇಂದಿಗೂ ದೊಡ್ಡ ಸವಾಲಾಗಿಯೇ ಉಳಿದಿದೆ. ಅತ್ಯುತ್ತಮ ಶಿಕ್ಷಣ ಹಾಗೂ ಪದವಿಗಳಿರುವವರೂ ಸಹ ಒಮ್ಮೊಮ್ಮೆ ಜೀವನ ಸಾಗಿಸಲು ಏನೇನೋ ಮಾಡಬೇಕಾಗಿ ಬಂದಿದೆ.
ದೆಹಲಿಯ ಪತ್ರಕರ್ತರೊಬ್ಬರು ತಮ್ಮ ಜೀವನ ಸಾಗಿಸಲು ಅವಲಕ್ಕಿ ಮಾರಾಟ ಮಾಡಲು ಮುಂದಾಗಿದ್ದಾರೆ. ದೆಹಲಿಯ ಐಐಎಂಸಿಯಲ್ಲಿ ವ್ಯಾಸಂಗ ಮಾಡಿದ ದದನ್ ವಿಶ್ವಕರ್ಮ ಮಾಜಿ-ಪತ್ರಕರ್ತರಾಗಿದ್ದುಆಜ್ ತಕ್ ವಾಹಿನಿಯಲ್ಲಿ ಕೆಲಸ ಮಾಡಿದ್ದಾರೆ.
ತಮ್ಮ ಈ ಹೊಸ ಕೆಲಸದ ಫೋಟೋವೊಂದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿರುವ ವಿಶ್ವಕರ್ಮ, “ನೀವು ಇದನ್ನು ಸ್ಟಾರ್ಟ್-ಅಪ್ ಎಂದು ಭಾವಿಸುವಿರೋ ಅಥವಾ ಉದ್ಯೋಗದ ವಿಧ ಎಂದಾದರೂ ತಿಳಿದುಕೊಳ್ಳಿ, ಈ ಸ್ಥಳ ಆಜ್ ತಕ್ ಕಚೇರಿ ಬಳಿಕ ಫಿಲಂ ಸಿಟಿಯಲ್ಲಿದೆ,” ಎಂದಿದ್ದಾರೆ.
ವಿಶ್ವಕರ್ಮರ ಈ ಪೋಸ್ಟ್‌ಗೆ ನೆಟ್ಟಿಗರಿಂದ ಸ್ಪಂದನಾತ್ಮಕ ಕಾಮೆಂಟ್‌ಗಳ ಸುರಿಮಳೆಯೇ ಆಗಿದೆ. “ಹೃತ್ಪೂರ್ವಕ ಅಭಿನಂದನೆಗಳು ಸಹೋದರ. ಇಂದಿನ ಕಾಲದಲ್ಲಿ, ಪತ್ರಿಕೋದ್ಯಮಕ್ಕಿಂತ (ಪತ್ರಕರ್ತ/ವರದಿಗಾರನಾಗಿ) ಇದೇ ಉತ್ತಮ ಕೆಲಸ. ನಿಮ್ಮ ಉದ್ಯಮದಲ್ಲಿ ನಿಮಗೆ ಯಶ ಸಿಗಲಿ,” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮೂಲಕ ಹಾರೈಸಿದ್ದಾರೆ.