ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಶುಕ್ರವಾರ ರಾತ್ರಿ ಅಪರಿಚಿತ ವ್ಯಕ್ತಿಗಳ ಗುಂಪೊಂದು ಭಾರತದ 21 ವರ್ಷದ ಸಿಖ್ ವಿದ್ಯಾರ್ಥಿಯ ಮೇಲೆ ದಾಳಿ ಮಾಡಿದೆ. ವಿದ್ಯಾರ್ಥಿಯ ಪೇಟವನ್ನು ಕಿತ್ತು ಅವನ ಕೂದಲು ಹಿಡಿದು ಕಾಲುದಾರಿಯ ಉದ್ದಕ್ಕೂ ದುಷ್ಕರ್ಮಿಗಳ ಗುಂಪು ಎಳೆದಾಡಿದೆ.
ಶುಕ್ರವಾರ ಮನೆಗೆ ಹಿಂದಿರುಗುತ್ತಿದ್ದ ವಿದ್ಯಾರ್ಥಿ ಗಗನ್‌ದೀಪ್ ಸಿಂಗ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸಿಟಿವಿ ಸುದ್ದಿ ವರದಿ ಮಾಡಿದೆ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ವಿದ್ಯಾರ್ಥಿಯನ್ನು ನೋಡಲು ಹೋದ ಕೌನ್ಸಿಲರ್ ಮೋಹಿನಿ ಸಿಂಗ್ ಅವರಿಗೆ ಆತನ ಕಿರುಚಾಟ ಕೇಳಿಸಿತು.
“ನಾನು ಅವನನ್ನು ನೋಡಿದಾಗ ನನಗೆ ಗಾಬರಿಯಾಯಿತು. ಅವರು ಮೃದುವಾದ ಸ್ವರದಲ್ಲಿ ಮಾತನಾಡುತ್ತಿದ್ದರು ಮತ್ತು ಅವರು ಬಾಯಿ ತೆರೆಯಲು ಸಾಧ್ಯವಾಗಲಿಲ್ಲ ಅವನ ಕಣ್ಣುಗಳು ಊದಿಕೊಂಡಿವೆ ಮತ್ತು ತುಂಬಾ ನೋವನ್ನು ಅನುಭವಿಸುತ್ತಿದ್ದಾರೆ ” ಎಂದು ಅವರು ಸುದ್ದಿ ವಾಹಿನಿಗೆ ತಿಳಿಸಿದರು.
ದಿನಸಿ ಖರೀದಿ ಬಳಿಕ ರಾತ್ರಿ 10:30ರ ಸುಮಾರಿಗೆ ಮನೆಗೆ ತೆರಳುತ್ತಿದ್ದ ಗಗನ್‌ದೀಪ್‌ಗೆ ಬಸ್‌ನಲ್ಲಿ 12ರಿಂದ 15 ಮಂದಿ ಯುವಕರ ಗುಂಪು ಎದುರಾಯಿತು. ಗಗನ್ ದೀಪ್ ಬಸ್ ನಿಂದ ಕೆಳಗಿಳಿದ ನಂತರ ಯುವಕರ ಗುಂಪು ಕೂಡ ಬಸ್ ನಿಂದ ಇಳಿದು ವಿದ್ಯಾರ್ಥಿಯನ್ನ ಹಿಂಬಾಲಿಸಿ ಕೃತ್ಯ ಎಸಗಿದೆ.