![](https://kannadadunia.com/wp-content/uploads/2023/03/maxresdefault-5-1024x576.jpg)
ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಪಾಟ್ನಾ ಜಂಕ್ಷನ್ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ಜಾಹೀರಾತುಗಳ ಬದಲಿಗೆ ಎಲ್ಇಡಿ ಪರದೆಗಳಲ್ಲಿ ಅಶ್ಲೀಲ ಕ್ಲಿಪ್ ಪ್ಲೇ ಆಗಿದೆ. ಅಶ್ಲೀಲ ದೃಶ್ಯಗಳನ್ನು ಸುಮಾರು 3 ನಿಮಿಷಗಳ ಕಾಲ ಪ್ರದರ್ಶಿಸಲಾಗಿದೆ.
ಇದನ್ನ ಅನೇಕ ಪ್ರಯಾಣಿಕರು ಅದನ್ನು ತಮ್ಮ ಫೋನ್ಗಳಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ಬಗ್ಗೆ ಹಲವರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ದೂರು ನೀಡಿದರು. ರೈಲ್ವೆ ರಕ್ಷಣಾ ಪಡೆ ಮಧ್ಯ ಪ್ರವೇಶಿಸಿ ದೃಶ್ಯಾವಳಿಗಳನ್ನು ನಿಲ್ಲಿಸಿತು.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ದೃಶ್ಯಗಳು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ರೈಲ್ವೆ ಸಚಿವಾಲಯವನ್ನು ಟ್ಯಾಗ್ ಮಾಡಿದ್ದಾರೆ.
ರೈಲ್ವೆ ಪ್ಲಾಟ್ ಫಾರ್ಮ್ ಪರದೆಯ ಮೇಲೆ ಜಾಹೀರಾತುಗಳು ಮತ್ತು ಮಾಹಿತಿಯನ್ನು ಪ್ರದರ್ಶಿಸುವ ಉಸ್ತುವಾರಿ ವಹಿಸಿರುವ ದತ್ತಾ ಕಮ್ಯುನಿಕೇಷನ್ ಎಂಬ ಏಜೆನ್ಸಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ವರದಿಗಳ ಪ್ರಕಾರ ಏಜೆನ್ಸಿಯನ್ನು ರೈಲ್ವೇ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಈ ಬಗ್ಗೆ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.