
ವಿಶಾಖಪಟ್ಟಣ: ಇಲ್ಲಿನ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಆಸ್ಟ್ರೇಲಿಯಾ 10 ವಿಕೆಟ್ ಗಳಿಂದ ಜಯಗಳಿಸಿದೆ. ಸರಣಿಯಲ್ಲಿ 1 -1 ಸಮ ಬಲ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಿಚೆಲ್ ಸ್ಟಾರ್ಕ್(5 ವಿಕೆಟ್) ದಾಳಿಗೆ ತತ್ತರಿಸಿ ಕೇವಲ 26 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 117 ರನ್ ಗಳಿಸಿದ್ದು, ಆಸ್ಟ್ರೇಲಿಯಾ 118 ರನ್ ಗೆಲುವಿನ ಗುರಿ ನೀಡಿತು.
ರೋಹಿತ್ ಶರ್ಮಾ 13, ಶುಭಮನ್ ಗಿಲ್ 0, ವಿರಾಟ್ ಕೊಹ್ಲಿ 31, ಸೂರ್ಯ ಕುಮಾರ್ ಯಾದವ್ 0, ಕೆ.ಎಲ್. ರಾಹುಲ್ 9, ಹಾರ್ದಿಕ್ ಪಾಂಡ್ಯ 1, ರವೀಂದ್ರ ಜಡೇಜ 16, ಅಕ್ಷರ್ ಪಟೇಲ್ ಅಜೇಯ 29, ಕುಲದೀಪ್ ಯಾದವ್ 4, ಮೊಹಮ್ಮದ್ ಶಮಿ 0, ಮೊಹಮ್ಮದ್ ಸಿರಾಜ್ 0 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾ ಪರವಾಗಿ ಮಾರಕ ದಾಳಿ ನಡೆಸಿದ ಮಿಚಲ್ ಸ್ಟಾರ್ಕ್ 5, ಸಿಯಾನ್ ಅಬೌಟ್ 3, ನೇಥನ್ ಎಲ್ಲಿಸ್ 2 ವಿಕೆಟ್ ಪಡೆದರು. ಗೆಲುವಿನ ಗುರಿ ಬೆನ್ನುತ್ತಿದ ಆಸ್ಟ್ರೇಲಿಯಾ 11 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 121 ಗಳಿಸಿದೆ. ಟ್ರಾವೆಸ್ ಹೆಡ್ ಅಜೇಯ 51, ಮಿಚೆಲ್ ಮಾರ್ಷ್ ಅಜೇಯ 66 ರನ್ ಗಳಿಸಿದ್ದಾರೆ.