ನಟಿಯನ್ನ ಬಾಂಗ್ಲಾ ಪೊಲೀಸರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರ ಹಿಂದಿದೆ ಈ ಕಾರಣ

ಬಾಂಗ್ಲಾದೇಶದ ನಟಿ ಮಹಿಯಾ ಮಹಿ ಅವರನ್ನು ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ನಟಿ ಮಹಿಯಾ ಮಹಿ ಮತ್ತು ಅವರ ಪತಿ ವಿರುದ್ಧ ಡಿಜಿಟಲ್ ಭದ್ರತಾ ಕಾಯ್ದೆ (ಡಿಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಬಂಧನಕ್ಕೊಳಗಾಗಿದ್ದಾರೆ.

ಪೊಲೀಸರು ಬಹಿರಂಗಪಡಿಸಿದ ಪ್ರಕರಣದ ಹೇಳಿಕೆಯ ಪ್ರಕಾರ, ಮಹಿಯಾ ಮಹಿ ಶುಕ್ರವಾರ ತನ್ನ ಫೇಸ್‌ಬುಕ್ ಪೇಜ್ ನ ಲೈವ್ ನಲ್ಲಿ ಪೊಲೀಸರ ವಿರುದ್ಧ ಆರೋಪ ಮಾಡಿದ್ದರು.

ಶನಿವಾರ ಸೌದಿ ಅರೇಬಿಯಾದಿಂದ ಹಿಂದಿರುಗಿದ ನಂತರ ಗಾಜಿಪುರ ಮೆಟ್ರೋಪಾಲಿಟನ್ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ. ಮಕ್ಕಾಕ್ಕೆ ಧಾರ್ಮಿಕ ಭೇಟಿಗಾಗಿ ಮಹಿ ಬಾಂಗ್ಲಾದೇಶದಿಂದ ತೆರಳಿದ್ದರು.

ನಟಿ ಬಾಂಗ್ಲಾದೇಶ ಪೊಲೀಸರೊಂದಿಗೆ ಸಮಸ್ಯೆಗೆ ಸಿಲುಕಿದ್ದು ಇದೇ ಮೊದಲಲ್ಲ. ಈ ಹಿಂದೆ ಫೇಸ್‌ಬುಕ್‌ನ ಲೈವ್‌ ನಲ್ಲಿ ಮಾತನಾಡುತ್ತಾ ಹೆಸರಾಂತ ಉದ್ಯಮಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಪೊಲೀಸರನ್ನು ಮಾನಹಾನಿ ಮಾಡಿದ ಆರೋಪದ ಮೇಲೆ ಮಹಿ ಮತ್ತು ಅವರ ಪತಿ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read