ಅತ್ಯತ ಅಪಾಯಕಾರಿ ಜೀವಿಗಳ ಪಟ್ಟಿಯಲ್ಲಿ ಪರಿಗಣಿಸಲಾಗುವ ಶಾರ್ಕ್‌ಗಳು ಆಗಾಗ ಡೈವರ್‌ಗಳ ಮೇಲೆ ದಾಳಿ ಮಾಡುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಆದರೆ ಇಲ್ಲಿಬ್ಬರು ಡೈವರ್‌ಗಳು ಶಾರ್ಕ್‌ನ ಅತ್ಯಂತ ಹತ್ತಿರಕ್ಕೆ ಹೋಗಿ ಬದುಕುಳಿದು ಬಂದಿದ್ದಾರೆ.
ಇಬ್ಬರು ಡೈವರ್‌ಗಳು ಶಾರ್ಕ್ ದಾಳಿಯ ಸಾಧ್ಯತೆಯ ತುತ್ತತುದಿಯಲ್ಲಿ ಬಚಾವಾಗಿ ಬಂದಿರುವ ವಿಡಿಯೋವೊಂದು ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.
ನೀರಿನಾಳದಲ್ಲಿ ದೈತ್ಯ ಶಾರ್ಕ್ ಈಜಿಕೊಂಡು ಹೋಗುತ್ತಿರುವ ಸನಿಹದಲ್ಲೇ ಡೈವರ್‌ಗಳನ್ನೂ ಸಹ ವಿಡಿಯೋದಲ್ಲಿ ನೋಡಬಹುದಾಗಿದೆ. ಆದರೆ ಅದೃಷ್ಟವಶಾತ್ ಶಾರ್ಕ್ ಈ ವೇಳೆ ಡೈವರ್‌ಗಳತ್ತ ಬರುವುದೇ ಇಲ್ಲ.
ಬೃಹತ್ ಅಕ್ವೇರಿಯಂ ಒಂದರಲ್ಲಿ ಈ ವಿಡಿಯೋ ಚಿತ್ರೀಕರಿಸಿದಂತಿದೆ. ಈ ವೇಳೆ ಭಾರೀ ಕಲ್ಲೊಂದರ ಮೇಲೆ ಇಬ್ಬರೂ ಡೈವರ್‌ಗಳನ್ನು ನೋಡಬಹುದಾಗಿದೆ. ತಮ್ಮೆದುರು ಭಾರೀ ಶಾರ್ಕ್ ಇದ್ದರೂ ಸಹ ಅವರ ಮೊಗದಲ್ಲಿ ಯಾವುದೇ ಭಯ ಕಾಣುತ್ತಿಲ್ಲ. ಅಲ್ಲದೇ ಅವರು ಶಾರ್ಕ್‌ನತ್ತ ಕೈ ಬೀಸುವುದನ್ನೂ ಸಹ ನೋಡಬಹುದಾಗಿದೆ.
ಬಹುಶಃ ಆ ಶಾರ್ಕ್ ನಿದ್ರೆ ಮಾಡುತ್ತಿತ್ತೋ ಏನೋ ಎಂಬರ್ಥದಲ್ಲಿ ನೆಟ್ಟಿಗರು ಈ ವಿಡಿಯೋಗೆ ಥರಾವರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
https://twitter.com/fasc1nate/status/1636630604350468096?ref_src=twsrc%5Etfw%7Ctwcamp%5Etweetembed%7Ctwterm%5E1636630604350468096%7Ctwgr%5E6585492ff04aba5a9e578cc78db93db784cb8b72%7Ctwcon%5Es1_&ref_url=https%3A%2F%2Fwww.news18.com%2Fbuzz%2Fvideo-of-divers-close-encounter-with-shark-takes-internet-by-storm-7325311.html
https://twitter.com/OTerrifying/status/1618467169830064129?ref_src=twsrc%5Etfw%7Ctwcamp%5Etweetembed%7Ctwterm%5E1618467169830064129%7Ctwgr%5E6585492ff04aba5a9e578cc78db93db784cb8b72%7Ctwcon%5Es1_&ref_url=https%3A%2F%2Fwww.news18.com%2Fbuzz%2Fvideo-of-divers-close-encounter-with-shark-takes-internet-by-storm-7325311.html