HomeEntertainmentSHOCKING…! ಆಸ್ಕರ್ ಸಮಾರಂಭಕ್ಕೆ ತಲಾ 20 ಲಕ್ಷ ರೂ. ಕೊಟ್ಟು ಹೋಗಿದ್ದ ರಾಜಮೌಳಿ, ಜೂ.NTR, ರಾಮ್...

SHOCKING…! ಆಸ್ಕರ್ ಸಮಾರಂಭಕ್ಕೆ ತಲಾ 20 ಲಕ್ಷ ರೂ. ಕೊಟ್ಟು ಹೋಗಿದ್ದ ರಾಜಮೌಳಿ, ಜೂ.NTR, ರಾಮ್ ಚರಣ್

‘ನಾಟು ನಾಟು’ ಹಾಡಿಗಾಗಿ ‘RRR’ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದು ಇತಿಹಾಸ ಬರೆದಿದೆ. ಇದಕ್ಕಾಗಿ ಪ್ರತಿಯೊಬ್ಬ ಭಾರತೀಯ ಹೆಮ್ಮೆಯಿಂದ ಬೀಗುತ್ತಿದ್ದಾರೆ.

ಪ್ರಶಸ್ತಿ ಸ್ವೀಕಾರ ವೇಳೆ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಮತ್ತು ಗೀತರಚನೆಕಾರ ಚಂದ್ರಬೋಸ್ ಹೊರತುಪಡಿಸಿ ಎಲ್ಲರೂ ನಿರ್ಗಮನ ದ್ವಾರದ ಬಳಿ ಕುಳಿತಿದ್ದರು. ಇದು ಟೀಕೆಗೆ ಕಾರಣವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆ ಸೀಟುಗಳನ್ನು ‘RRR’ ಚಿತ್ರ ತಂಡಕ್ಕಾಗಿ ಅಕಾಡೆಮಿಯಿಂದ ಕಾಯ್ದಿರಿಸಿರಲಿಲ್ಲ. ಯಾವುದೇ ಉಚಿತ ಟಿಕೆಟ್‌ಗಳನ್ನು ಸ್ವೀಕರಿಸದ ಕಾರಣ ನಿರ್ದೇಶಕ ಎಸ್‌.ಎಸ್. ರಾಜಮೌಳಿ ಅವರೇ ಟಿಕೆಟ್ ಖರೀದಿಸಬೇಕಾಯಿತು. ನಾಟು ನಾಟು ಸಂಯೋಜಕ ಎಂ.ಎಂ. ಕೀರವಾಣಿ, ಗೀತರಚನೆಕಾರ ಚಂದ್ರಬೋಸ್ ಮತ್ತು ಅವರ ಪತ್ನಿಯರಿಗೆ ಮಾತ್ರ ಆಸ್ಕರ್ 2023 ಗೆ ಉಚಿತ ಪ್ರವೇಶ ನೀಡಲಾಗಿದೆ. ಅಕಾಡೆಮಿ ಪ್ರಶಸ್ತಿ ಸಿಬ್ಬಂದಿ ಪ್ರಕಾರ, ಪ್ರಶಸ್ತಿ ಪುರಸ್ಕೃತರು ಮತ್ತು ಅವರ ಕುಟುಂಬ ಸದಸ್ಯರು ಮಾತ್ರ ಉಚಿತ ಪಾಸ್‌ಗೆ ಅರ್ಹರಾಗಿರುತ್ತಾರೆ. ಈವೆಂಟ್ ಅನ್ನು ನೇರವಾಗಿ ವೀಕ್ಷಿಸಲು ಎಲ್ಲರೂ ಟಿಕೆಟ್‌ಗಾಗಿ ಪಾವತಿಸಬೇಕಾಗಿತ್ತು.

ಹೀಗಾಗಿ, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಎಸ್‌.ಎಸ್. ರಾಜಮೌಳಿ ಅವರು ತಮ್ಮ ತಂಡದ ಇತರ ಸದಸ್ಯರಿಗೆ ಟಿಕೆಟ್ ಖರೀದಿಸಿದ್ದಾರೆ ಎನ್ನಲಾಗಿದೆ. ಆಸ್ಕರ್ 2023 ರ ಟಿಕೆಟ್ ಪ್ರತಿ ವ್ಯಕ್ತಿಗೆ 25,000 $ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ, ಇದು 20.6 ಲಕ್ಷ ರೂ.ಗೆ ಸಮಾನವಾಗಿದೆ.

ಎಸ್‌.ಎಸ್. ರಾಜಮೌಳಿ ತಮ್ಮ ಪತ್ನಿ ರಮಾ ರಾಜಮೌಳಿ, ಮಗ ಕಾರ್ತಿಕೇಯ ಮತ್ತು ಸೊಸೆಯೊಂದಿಗೆ ಪ್ರತಿಷ್ಠಿತ ಸಮಾರಂಭದಲ್ಲಿ ಭಾಗವಹಿಸಿದ್ದರು. ಚಿತ್ರದ ನಾಯಕ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಕೂಡ ತಮ್ಮ ಪತ್ನಿಯರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಒಂದೆರಡು ದಿನಗಳ ಹಿಂದಷ್ಟೇ ಅಕಾಡೆಮಿ ಅವರಿಗೆ ಕೊನೆಯ ಸಾಲಿನ ಸೀಟುಗಳನ್ನು ನೀಡಿದ್ದಕ್ಕೆ ಟೀಕೆ ವ್ಯಕ್ತವಾಗಿತ್ತು. ಈಗ ಅಸಲಿ ವಿಷಯ ಇದೆಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular