ಬಡವರ ಅಮೃತ ಎಂದೇ ಹೇಳಲಾಗುವ ಮಜ್ಜಿಗೆ ಬೇಸಿಗೆ ಕಾಲಕ್ಕೆ ಬೇಕೇ ಬೇಕು. ಇದೊಂದು ಎನರ್ಜಿ ಡ್ರಿಂಕ್ ಅಂತಲೇ ಹೇಳಬಹುದು. ಮಜ್ಜಿಗೆ ಜೀರ್ಣಕ್ರಿಯೆ ಶಕ್ತಿಯನ್ನು ಹೆಚ್ಚಿಸುತ್ತದೆ. ಕಫ ಹಾಗೂ ವಾತ ದೋಷಗಳನ್ನು ಶಮನ ಮಾಡುತ್ತದೆ. ಹಾಗೇ ಮಜ್ಜಿಗೆ ಕುಡಿಯುವುದರಿಂದ ಇನ್ನೇನೆಲ್ಲಾ ಉಪಯೋಗಗಳಿವೆ ನೋಡಿ.
* ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆ ಇರುವವರು ಪ್ರತಿದಿನ ಮಜ್ಜಿಗೆ ಕುಡಿಯುವುದು ಒಳ್ಳೆಯದು. ಇದು ಹೊಟ್ಟೆಯನ್ನು ತಂಪಾಗಿಸುತ್ತದೆ ಹಾಗೂ ಮಲಬದ್ಧತೆ ಸಮಸ್ಯೆ ಉಂಟು ಮಾಡುವುದಿಲ್ಲ.
* ಹೊಟ್ಟೆ ನೋವು ಅಜೀರ್ಣದ ತೊಂದರೆ ಇದ್ದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೂಡಲೇ ಕಮ್ಮಿ ಯಾಗುವುದು.
* ಅಸಿಡಿಟಿ, ಎದೆ ಉರಿ ಇರುವವರು ಮಜ್ಜಿಗೆ ಕುಡಿದರೆ ಅದು ಕೂಡ ಹತೋಟಿಗೆ ಬಂದು ರಿಲೀಫ್ ಸಿಗುವುದು.
* ಒಂದು ಚಮಚ ಸಕ್ಕರೆ, ರುಚಿಗೆ ಸ್ವಲ್ಪ ಉಪ್ಪು ಸೇರಿಸಿ ಪ್ರತಿ ದಿನ ಒಂದು ಗ್ಲಾಸ್ ಮಜ್ಜಿಗೆ ಸೇವನೆ ಮಾಡಿದರೆ ತ್ವಚೆಯ ಕಾಂತಿ ಹೆಚ್ಚುತ್ತದೆ.
* ಸಕ್ಕರೆ ಕಾಯಿಲೆ ಇರುವವರು ಮಜ್ಜಿಗೆ ಕುಡಿಯುತ್ತಿದ್ದರೆ ದೇಹದ ಸ್ಥಿತಿ ನಿಯಂತ್ರಣದಲ್ಲಿರುತ್ತದೆ.
* ಬೇಧಿ, ರಕ್ತ ಬೇಧಿ ಹಾಗೂ ಕರುಳಿನಲ್ಲಿ ಆಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಲು ಮಜ್ಜಿಗೆ ರಾಮಬಾಣ.
* ಲಿವರ್ ನಲ್ಲಿರುವ ವಿಷ ಗುಣಗಳನ್ನು ತೆಗೆದು ಹಾಕುವ ಶಕ್ತಿ ಮಜ್ಜಿಗೆಗಿದೆ.
* ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಮಜ್ಜಿಗೆ ಕುಡಿಯುತ್ತಿದ್ದರೆ ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಂಶ ತೆಗೆದುಹಾಕಬಹುದು.
* ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಹಾಗೂ ಫಾಸ್ಪರಸ್ ಅಂಶವಿದ್ದು ಮೂಳೆಗಳಿಗೆ ಅಗತ್ಯ ಶಕ್ತಿ ನೀಡುವ ಕೆಲಸ ಮಾಡುತ್ತದೆ.
* ಮಜ್ಜಿಗೆ ಕುಡಿದರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಬಹುದು.