ಸಾವಿರಾರು ರೂಪಾಯಿ ಖರ್ಚಿಲ್ಲ; ಮನೆಯಲ್ಲಿ ಕುಳಿತೇ ಪಡೆಯಬಹುದು ಫ್ಯಾನ್ಸಿ ಮೊಬೈಲ್‌ ನಂಬರ್‌….!

ವಿಐಪಿ ಸಂಸ್ಕೃತಿ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿದೆ. ಕೆಲವರು ಹೈಫೈ ಆಗಿಯೇ ಬದುಕಲು ಇಷ್ಟಪಡ್ತಾರೆ. ಇದಕ್ಕಾಗಿ ದುಬಾರಿ ಬಟ್ಟೆ, ಕಾರು ಹೀಗೆ ವಿವಿಧ ಐಷಾರಾಮಿ ವಸ್ತುಗಳು ಬೇಕು. ಇನ್ನು ಕೆಲವರ ನಡವಳಿಕೆಯಲ್ಲೇ ವಿಐಪಿ ಸ್ಪರ್ಷವಿರುತ್ತದೆ. ಅಂಥವರು ಮೊಬೈಲ್‌ ನಂಬರ್‌ಗಳಲ್ಲಿ ಕೂಡ ವಿಐಪಿ ಸಂಖ್ಯೆಯನ್ನು ಹುಡುಕುತ್ತಾರೆ. ವಿಐಪಿ ಫೋನ್ ಸಂಖ್ಯೆಯನ್ನು ಪಡೆಯುವ ಪ್ರಕ್ರಿಯೆ ತುಂಬಾ ಸುಲಭವಾಗಿದೆ. ಮನೆಯಲ್ಲಿ ಕುಳಿತೇ ಇದನ್ನು ಪಡೆದುಕೊಳ್ಳಬಹುದು.

ಈ ಹಿಂದೆ ವಿಐಪಿ ಸಂಖ್ಯೆಗಳಿಗಾಗಿ ಸಾವಿರಾರು ಬಿಡ್‌ಗಳು ಬರುತ್ತಿದ್ದವು, ಆದರೆ ಈಗ ಹಾಗಿಲ್ಲ. ವೊಡಾಫೋನ್ ಐಡಿಯಾ (VI),  ತನ್ನ ಬಳಕೆದಾರರಿಗಾಗಿ ವಿಐಪಿ ಸಂಖ್ಯೆಯನ್ನು ನೀಡುತ್ತಿದೆ. ಉಚಿತವಾಗಿ ಫ್ಯಾನ್ಸಿ ಸಿಮ್ ನಂಬರ್ ಅನ್ನು ಗ್ರಾಹಕರು ಪಡೆಯಬಹುದು. ಬಯಸಿದ ಫೋನ್ ಸಂಖ್ಯೆಯನ್ನು ಪಡೆಯಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವ ಅಗತ್ಯವಿಲ್ಲ.

ಮೊದಲು ನೀವು ವೊಡಾಫೋನ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. ಹೊಸ ಸಂಪರ್ಕ ಮತ್ತು ಫ್ಯಾನ್ಸಿ ಮೊಬೈಲ್ ಸಂಖ್ಯೆಯನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಪಿನ್ ಕೋಡ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಬಳಿಕ ಉಚಿತ ಪ್ರೀಮಿಯಂ ಮೊಬೈಲ್ ಸಂಖ್ಯೆಗಳ ಪಟ್ಟಿಯಿಂದ ನೀವು ನಿಮಗಾಗಿ ಸಂಖ್ಯೆಯನ್ನು ಆರಿಸಬೇಕಾಗುತ್ತದೆ. ಈ ಪ್ರಕ್ರಿಯೆಯ ನಂತರ OTP ಬರುತ್ತದೆ. ಹೊಸ ಸಂಪರ್ಕದೊಂದಿಗೆ ನೀವು VIP ಸಂಖ್ಯೆಯನ್ನು ಖರೀದಿಸಬಹುದು.

ಪ್ರಸ್ತುತ VI (ವೊಡಾಫೋನ್-ಐಡಿಯಾ) ಈ ಯೋಜನೆಯನ್ನು ನೀಡುತ್ತಿದೆ. ಈ ಕಂಪನಿ ತನ್ನ ಗ್ರಾಹಕರಿಗೆ ಉಚಿತವಾಗಿ ವಿಐಪಿ ಸಂಖ್ಯೆಗಳನ್ನು ವಿತರಿಸುತ್ತಿದೆ. ಇದಕ್ಕಾಗಿ ನಿಮ್ಮಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಡೆಯುವುದಿಲ್ಲ. ನಿಮ್ಮ ಸಿಮ್‌ ಕಾರ್ಡ್‌ ಅನ್ನು ಮನೆಗೇ ತಲುಪಿಸಲಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read