ರಾಜಸ್ಥಾನದ ಮರುಳಿನ ರಾಶಿ ತುಂಬಿದ ಪ್ರದೇಶದಲ್ಲಿ ಒಂಟೆಗಳು ಓಡಾಡ್ತಿರೋದನ್ನ ನೋಡ್ತಿದ್ರೆನೇ ಚೆಂದ. ಇನ್ನೂ ಕೇರಳ ಕಡೆ ಬಂದರೆ ಆನೆಗಳು ಅಲ್ಲಲ್ಲಿ ಜನರ ಮಧ್ಯೆಯೇ ಓಡಾಡೊದನ್ನ ನೋಡ್ಬಹುದು. ಒಂದೊಂದು ಪ್ರದೇಶ ಒಂದೊಂದು ವಿಶೇಷತೆ.
ಅಂತಹ ಪ್ರದೇಶಗಳಲ್ಲಿ ಪ್ರವಾಸಿಗರು ಭೇಟಿ ಕೊಟ್ಟಾಗ, ಒಂಟೆ, ಆನೆ ಆಗಿರಬಹುದು ಅಥವಾ ಇನ್ನೂ ಬೇರೆ ಯಾವುದಾದರೂ ಪ್ರಾಣಿಯಾಗಿರಬಹುದು ಅವುಗಳ ಬೆನ್ನೇರಿ ತಾವು ಕೂಡಾ ವಿಶೇಷ ಅನುಭವ ಪಡೆಯಬೇಕು ಅನ್ನೊ ಆಸೆಯನ್ನ ಹೊಂದಿರುತ್ತಾರೆ. ಇತ್ತೀಚೆಗೆ ಯುವತಿಯೊಬ್ಬರು ಇದೇ ರೀತಿಯ ವಿಶೇಷ ಅನುಭವ ಹೊಂದಲೆಂದೇ ಆಸ್ಟ್ರಿಚ್ ಪಕ್ಷಿಯ ಮೇಲೆ ಕೂತಿದ್ದಾಳೆ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು. ಈ ವಿಡಿಯೋ ನೋಡಿ ನೆಟ್ಟಿಗರು ಕಿಡಿಕಾರಿದ್ದಾರೆ.
ಪೊಸ್ಟೊರ್ ಮಕ್ಸರ್ರ್…… ಅನ್ನೊ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಈ ಒಂದು ಫೋಟೋವನ್ನ ಅಪ್ಲೋಡ್ ಮಾಡಲಾಗಿದೆ. ಇಲ್ಲಿ ಯುವತಿಯೊಬ್ಬಳು ಆಸ್ಟ್ರಿಚ್ ಪಕ್ಷಿಯ ಮೇಲೆ ಕೂತಿರುತ್ತಾಳೆ. ಅಲ್ಲೇ ಇದ್ದ ವ್ಯಕ್ತಿ ಆ ಪಕ್ಷಿಯನ್ನ ತಳ್ಳುತ್ತಾನೆ. ಆ ಪಕ್ಷಿ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿನತ್ತ ಓಡುತ್ತೆ. ಅಲ್ಲೇ ಇದ್ದ ಇನ್ನೆರಡು ಆಸ್ಟ್ರಿಚ್ ಪಕ್ಷಿಗಳು ಅದಕ್ಕೆ ಅಡ್ಡಬಂದರೂ, ಆ ಆಸ್ಟ್ರಿಚ್ ಪಕ್ಷಿ ತನ್ನ ಬೆನ್ನಮೇಲೇರಿ ಕೂತಿದ್ದ ಯುವತಿಯನ್ನ ಸೇಫ್ ಆಗಿ ಕರೆದುಕೊಂಡು ಹಿಂದಿರುಗುತ್ತೆ. ಅಲ್ಲಿದ್ದ ಕೆಲವರು ಇದನ್ನ ನೋಡಿ ಎಂಜಾಯ್ ಮಾಡ್ತಿರ್ತಾರೆ.
ಈ ವಿಡಿಯೋ ವೈರಲ್ ಆಗಿದ್ದು, 4.7 ಮಿಲಿಯನ್ ಜನರು ಈ ವಿಡಿಯೋನ್ನ ನೋಡಿದ್ದಾರೆ. ಅದರಲ್ಲಿ ಅನೇಕ ನೆಟ್ಟಿಗರು ಪಕ್ಷಿಗೆ ಹಿಂಸೆ ಕೊಟ್ಟು ಆನಂದ ಅನುಭವಿಸ್ತಿರುವ ಮನುಷ್ಯರ ಮನಸ್ಥಿತಿಯನ್ನ ಖಂಡಿಸಿದ್ದಾರೆ. ಈ ವಿಡಿಯೋ ನೋಡಿ ಒಬ್ಬರು ’ಬಡ ಪಕ್ಷಿ’ ಎಂದು ಕಾಮೆಂಟ್ ಹಾಕಿದ್ದಾರೆ. ಇನ್ನೊಬ್ಬರು ’ಮನುಷ್ಯರೇ ಪ್ರಾಣಿಗಳಂತೆ ವರ್ತಿಸುತ್ತಿದ್ಧಾರೆ’ ಎಂದು ಹೇಳಿದ್ಧಾರೆ. ಮಗದೊಬ್ಬರು’ನಿಮಗೂ ಎರಡು ಕಾಲುಗಳಿವೆ ಪಕ್ಷಿಗಳ ಜೊತೆ ಈ ರೀತಿಯ ವರ್ತನೆ ಸರಿಯಾ’ ಎಂದು ಹೇಳಿದ್ಧಾರೆ.
ನೋಡಲು ಫನ್ನಿ ಅಂತ ಅನಿಸಿದರೂ ಈ ವಿಡಿಯೋ ಅನೇಕ ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಅಸಲಿಗೆ ಆಸ್ಟ್ರಿಚ್ ಪಕ್ಷಿ ಉಳಿದೆಲ್ಲ ಪಕ್ಷಿಯಂತೆ ಆಕಾರದಲ್ಲಿ ಚಿಕ್ಕದಾಗಿ, ಸೌಮ್ಯವಾಗಿ ಇರುವ ಪಕ್ಷಿಯಲ್ಲ. ಅದು ಬಲಿಷ್ಠ ಅಷ್ಟೆ ವಿಶಾಲಕಾಯದ ಪಕ್ಷಿ. ಆದರೂ ಮನಷ್ಯರ ಈ ವರ್ತನೆ ಖಂಡನೀಯ. ಈ ಹಿಂದೆಯೂ ಈ ರೀತಿಯ ವಿಡಿಯೋಗಳನ್ನ ನೆಟ್ಟಿಗರು ಖಂಡಿಸಿದ್ದಾರೆ.
https://youtu.be/qd2SqwsMziM