ಗರ್ಭಿಣಿಯರು ಫೋಟೋಶೂಟ್ ಮಾಡಿಸಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಂದು ವಿಭಿನ್ನ ಫೋಟೋ ಶೂಟ್ ವೈರಲ್ ಆಗಿದೆ. ತಮ್ಮ ಮೂರನೆಯ ತಲೆಮಾರಿನ ಸೊಸೆ ಗರ್ಭಿಣಿಯಾದಾಗ, ಕುಟುಂಬಸ್ಥರೆಲ್ಲರೂ ಹೇಗೆ ಮಗುವಿಗಾಗಿ ಕಾತರಿಸುತ್ತಿದ್ದಾರೆ ಎನ್ನುವ ವಿಡಿಯೋ ಇದಾಗಿದ್ದು, ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಮಾತೃತ್ವ ಎಂಬ ಹೆಸರಿನಲ್ಲಿ ಈ ವಿಡಿಯೋ ಮಾಡಲಾಗಿದೆ. ಛಾಯಾಗ್ರಾಹಕ ಜಿಬಿನ್ ಜಾಯ್ ಅವರು ತಮ್ಮ ಪ್ರೀತಿಯ ಗರ್ಭಿಣಿ ಪತ್ನಿ ಚಿಂಚು ಪಿಎಸ್ ಅವರ ಫೋಟೋ ಶೂಟ್ ಮಾಡಿಸಿದ್ದಾರೆ. ಗರ್ಭಿಣಿಯಾಗಿರುವ ಪತ್ನಿ ಹಾಗೂ ತಮ್ಮ ಮೂರು ತಲೆಮಾರಿನ ದಂಪತಿಯನ್ನು ಈ ವಿಡಿಯೋಯಲ್ಲಿ ತೋರಿಸಿದ್ದಾರೆ.
ಸುಂದರವಾದ ದೃಶ್ಯದ ನಡುವೆ, ಇಡೀ ಕುಟುಂಬದ ಪ್ರೀತಿಯನ್ನು ಇದರಲ್ಲಿ ತೋರಿಸುತ್ತದೆ. ಸಾಂಕೇತಿಕವಾಗಿ ಎಲ್ಲರೂ ತಾವೇ ಖುದ್ದು ಗರ್ಭಿಣಿಯರು ಎಂದು ಅಂದುಕೊಂಡು ಆ ಮಗುವಿನ ಆಗಮನಕ್ಕೆ ಕಾಯುತ್ತಿರುವಂತೆ ತೋರಿಸಲಾಗಿದೆ. ವಿಡಿಯೋದಲ್ಲಿ 87 ವರ್ಷದ ಪುರುಷನು ತನ್ನ ಹೆಂಡತಿಯ ಹಣೆಗೆ ಕೋಮಲವಾಗಿ ಚುಂಬಿಸುತ್ತಿರುವುದನ್ನು ನೋಡಬಹುದು. ಇದರ ಜೊತೆ ಜಾಯ್ ಜಾರ್ಜ್ (60) ತ್ರೇಸಿಯಮ್ಮ ಜಾಯ್ (59) ಮತ್ತು ಸಾಬು ಪಿಟಿ (55), ಮತ್ತು ಸುಜಾತಾ ಸಾಬು (47) ಕೂಡ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.
“ನಾಲ್ಕು ತಲೆಮಾರುಗಳು ಕಳೆದಿವೆ ಮತ್ತು ಈಗ ನಾವು ಕಿರಿಯ ಸೊಸೆಯ ಮಗುವಿಗೆ ಕಾಯುತ್ತಿದ್ದೇವೆ” ಎಂದು ಜಾರ್ಜ್ ಚಾಕೊ ಹೇಳಿದ್ದಾರೆ.
https://youtu.be/labwnwRfQdY