ಹಣಕ್ಕೆ ಪ್ರಾಮುಖ್ಯತೆ ಕೊಡಲ್ಲ ಎಂದ ಸೋನಂ ಕಪೂರ್​: ಟ್ರೋಲ್​ಗೆ ಒಳಗಾಗ್ತಿರೋ ನಟಿ

ಬಾಲಿವುಡ್ ನಟಿ ಸೋನಂ ಕಪೂರ್ ಅವರ ಹಳೆಯ ಸಂದರ್ಶನವೊಂದು ಇತ್ತೀಚೆಗೆ ವೈರಲ್ ಆಗಿದ್ದು, ಭಾರಿ ಟ್ರೋಲ್​ಗೆ ನಟಿ ಒಳಗಾಗುತ್ತಿದ್ದಾರೆ.
ವೀಡಿಯೊದಲ್ಲಿ, ನಟಿ “ಹಣದ ಪ್ರಾಮುಖ್ಯತೆ” ಕುರಿತು ಮಾತನಾಡುವುದನ್ನು ಕಾಣಬಹುದು. ನನಗೆ ಹಣವೆಂದರೆ ಹೆಚ್ಚು ಪ್ರಾಮುಖ್ಯತೆ ಅಲ್ಲ. ಅದಕ್ಕಾಗಿಯೇ ನನ್ನ ತಾಯಿ ಯಾವಾಗಲೂ ನಿನಗೆ ಹಣ ಮುಖ್ಯವೇ ಅಲ್ಲ ಎನ್ನುತ್ತಿರುತ್ತಾರೆ ಎಂದು ನಟಿ ಹೇಳೀದ್ದಾರೆ. ನಾನು ಹಣಕ್ಕೆ ಹೆಚ್ಚಿನ ಬೆಲೆ ಕೊಡುವುದಿಲ್ಲ. ಏಕೆಂದರೆ ಅದು ಸದಾ ನನ್ನ ಬಳಿ ಇರುತ್ತದೆ. ಆದ್ದರಿಂದ ನನಗೆ ಹಣ ಮುಖ್ಯವೇ ಅಲ್ಲ ಎಂದಿದ್ದಾರೆ.

ಹೆಚ್ಚು ಹಣ ಇರುವ ವ್ಯಕ್ತಿಯ ಜೊತೆ ಡೇಟಿಂಗ್​ ಮಾಡಿರುವ ಕಾರಣವನ್ನು ಪತ್ರಕರ್ತರೊಬ್ಬರು ಕೇಳಿದಾಗ, ನಾನು ತುಂಬಾ ಸಿಂಪಲ್​ ಹುಡುಗಿ. ನನ್ನ ಡ್ರೆಸ್​ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಹಣಕ್ಕೆ ನಾನು ಪ್ರಾಮುಖ್ಯತೆ ಕೊಡುವುದಿಲ್ಲ ಎಂದ ನಟಿ, ಡೇಟಿಂಗ್​ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.
ಇದರಿಂದ ನೆಟ್ಟಿಗರು ಬಹಳ ಟ್ರೋಲ್​ ಮಾಡುತ್ತಿದ್ದಾರೆ. ಈ ಹಿಂದೆ ವಿಡಿಯೋ ವೈರಲ್​ ಆದಾಗಲೂ ನಟಿ ಟ್ರೋಲ್​ಗೆ ಒಳಗಾಗಿದ್ದರು. ಈಗ ಪುನಃ ವಿಡಿಯೋ ನೋಡಿ ಆಕೆಯ ಕಾಲೆಳೆಯುತ್ತಿದ್ದಾರೆ. ನಿಮ್ಮ ಬಳಿ ಇರುವ ಹಣವನ್ನು ಬಡವರಿಗೆ ದಾನ ಮಾಡಿಬಿಡಿ ಹಾಗಿದ್ದರೆ ಎನ್ನುತ್ತಿದ್ದಾರೆ.

https://www.youtube.com/shorts/Or6tF__ajLk

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read