ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ಮೂಲ ಹಾಡು ಗೌರವಕ್ಕೆ ಭಾಜವಾದ ತೆಲುಗಿನ ಆರ್‌ಆರ್‌ಆರ್ ಚಿತ್ರದ ’ನಾಟು ನಾಟು’ ಹಾಡು ಇದೀಗ ಅಂತರ್ಜಾಲದಲ್ಲಿ ಮತ್ತೊಮ್ಮೆ ಧೂಳೆಬ್ಬಿಸಿದೆ.
ಸ್ವರ್ಣ ಪ್ರತಿಮೆಯ ಗರಿಯನ್ನು ಪಡೆಯುವ ಹಾದಿಯಲ್ಲಿ ನಾಟು ನಾಟು ಹಾಡು ಅಂತಿಮ ಸುತ್ತಿನಲ್ಲಿ ಇತರ ಸ್ಫರ್ಧಿಗಳಾದ ಟಾಪ್ ಗನ್: ಮಾವರಿಕ್‌ನ ಚಿತ್ರದ ಲೇಡಿ ಗಾಗಾಸ್ ಹೋಲ್ಡ್ ಮೈ ಹ್ಯಾಂಡ್, ಬ್ಲಾಕ್ ಪ್ಯಾಂಥರ್ ಚಿತ್ರದಲ್ಲಿ ರಿಯಾನ್ನಾರ ಲಿಫ್ಟ್ ಮೀ ಅಪ್, ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್ ಚಿತ್ರದ ದಿಸ್ ಇಸ್ ಎ ಲೈ ಹಾಗೂ ಟೆಲ್ ಲೈಕ್ ಎ ವುಮನ್‌ನ ಅಪ್ಲಾಸ್ ಹಾಡುಗಳನ್ನು ಹಿಂದಿಕ್ಕಿದೆ.
ಗೂಗಲ್ ಸರ್ಚ್‌ನಲ್ಲಿ ನಾಟು ನಾಟು ಹಾಡಿಗೆ ಆಗುತ್ತಿದ್ದ ಸರ್ಚ್‌ಗಳ ಸಂಖ್ಯೆಯಲ್ಲಿ ಒಮ್ಮೆಲೇ 1,105%ದಷ್ಟು ಏರಿಕೆ ಕಂಡು ಬಂದಿದೆ ಎಂದು ಬುಧವಾರದ ವರದಿಯೊಂದು ತಿಳಿಸಿದೆ. ಎಂದಿನ ಸರಾಸರಿಯ ಹತ್ತು ಪಟ್ಟು ಹೆಚ್ಚು ಶೋಧಗಳು ಈ ವೇಳೆಯಲ್ಲಿ ಆಗಿವೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಬಿಡುಗಡೆಯಾದಾಗಿನಿಂದ ನಾಟು ನಾಟು ಹಾಡು ಟಿಕ್‌ಟಾಕ್‌ನಲ್ಲೇ 52.6 ದಶಲಕ್ಷ ವೀಕ್ಷಣೆಗಳನ್ನು ಕಂಡಿದೆ ಎನ್ನಲಾಗುತ್ತಿದೆ.