ಮಾರ್ಚ್ 20 ರಿಂದ ಟ್ವಿಟರ್ ಬ್ಲೂ ಟಿಕ್ ಚಂದಾದಾರರಿಗೆ ಮಾತ್ರ SMS ಆಧಾರಿತ ಟು ಫ್ಯಾಕ್ಟರ್ ದೃಢೀಕರಣ ಸೇವೆ ಲಭ್ಯವಿರುತ್ತದೆ ಎಂಬ ಘೋಷಣೆಯಿಂದ ಗೊಂದಲಕ್ಕೊಳಗಾದ ಅನೇಕ ಟ್ವಿಟರ್ ಬಳಕೆದಾರರಲ್ಲಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಕೂಡ ಸೇರಿದ್ದಾರೆ. ಈ ಗೊಂದಲದಿಂದಾಗಿ ಅವರು ಇಲಾನ್ ಮಸ್ಕ್ ಗೆ ತಮ್ಮ ಟ್ವಿಟರ್ ಖಾತೆಯನ್ನು ಸುರಕ್ಷಿತವಾಗಿ ಇಡುವುದು ಹೇಗೆಂದು ಕೇಳಿದ್ದಾರೆ.
ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ ಸಾಮಾಜಿಕ ಜಾಲತಾಣದಲ್ಲಿ ಹಲವು ಬದಲಾವಣೆಗಳನ್ನು ಮಾಡಿರುವ ಇಲಾನ್ ಮಸ್ಕ್ ಅವರನ್ನು ಟ್ಯಾಗ್ ಮಾಡುವ ಪ್ರಶ್ನೆಯನ್ನು ಪೋಸ್ಟ್ ಮಾಡಿದ್ದಾರೆ.
“ಸರಿ !! ನಾನು ಈಗ ಮಾರ್ಚ್ 19 ರ ಮೊದಲು ನನ್ನ ಟ್ವಿಟರ್ ಖಾತೆಯನ್ನು ಸುರಕ್ಷಿತವಾಗಿ ಹೇಗೆ ಪಡೆಯುವುದು, ನಾನು ಪಾಪ್ ಅಪ್‌ಗಳನ್ನು ಪಡೆಯುತ್ತಿದ್ದೇನೆ. ಆದರೆ ಯಾವುದೇ ಲಿಂಕ್‌ಗಳು ಸ್ಪಷ್ಟತೆ ತೋರುತ್ತಿಲ್ಲ. ಇಲಾನ್ ಮಸ್ಕ್ ಅಗತ್ಯವಿರುವುದನ್ನು ಪರಿಹರಿಸಿದರೆ ಸಂತೋಷವಾಗುತ್ತದೆ. ದಯವಿಟ್ಟು ನನಗೆ ಸರಿಯಾದ ದಿಕ್ಕು ತೋರಿಸಿ,” ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಟ್ವಿಟರ್ ಬಳಕೆದಾರರು ಆರ್ ಅಶ್ವಿನ್ ಗೆ ಬಗೆ ಬಗೆಯ ಸಲಹೆ ನೀಡುತ್ತಿದ್ದಾರೆ.