ನಿಮ್ಮ ಡಿಪಿ ನೋಡಿ ನಾನು ಬಂದೆ ಎಂದು ಯುವತಿಗೆ ಹೇಳಿದ ರ್ಯಾಪಿಡೋ ಚಾಲಕ; ನೆಟ್ಟಿಗರ ಆಕ್ರೋಶ 15-03-2023 10:00PM IST / No Comments / Posted In: Automobile News, Bike News, Latest News, India, Live News ಮಹಿಳಾ ಪ್ರಯಾಣಿಕರೊಂದಿಗೆ ರ್ಯಾಪಿಡೋ ಚಾಲಕ ಅನುಚಿತವಾಗಿ ವರ್ತಿಸಿರೋ ಘಟನೆ ಬೆಳಕಿಗೆ ಬಂದಿದ್ದು ನೆಟ್ಟಿಗರು ಈ ಬಗ್ಗೆ ಚಾಲಕನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಯಾಣದ ಬಳಿಕ ಚಾಲಕ ವಾಟ್ಸ್ ಅಪ್ ನಲ್ಲಿ ಮಹಿಳೆಗೆ ಅನುಚಿತವಾಗಿ ಸಂದೇಶ ಕಳಿಸಿದ್ದಾನೆ. ವಾಟ್ಸಾಪ್ ಮೂಲಕ ತನ್ನ ಲೊಕೇಷನ್ ಹಂಚಿಕೊಂಡ ನಂತರ ರಾಪಿಡೋ ಬೈಕ್ ಚಾಲಕ ಮಹಿಳೆಗೆ ಕಿರುಕುಳ ನೀಡಿದ್ದಾನೆ. ಮಹಿಳೆಯು ಟ್ವಿಟರ್ ನಲ್ಲಿ ಈ ಬಗ್ಗೆ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು ಚಾಲಕನು, ಆಗಲೇ ಮಲಗಿಬಿಟ್ಟಿದ್ದೀರಾ? ನಿಮ್ಮ ಡಿಪಿ ಮತ್ತು ವಾಯ್ಸ್ ಕೇಳಿದ ಬಳಿಕ ಅಷ್ಟು ದೂರ ಬರಲು ಒಪ್ಪಿದೆ. ಇಲ್ಲದಿದ್ದರೆ ಖಂಡಿತ ಬರುತ್ತಿರಲಿಲ್ಲ. ನನ್ನನ್ನು ಭಯ್ಯಾ ಎಂದು ಮಾತ್ರ ಕರೆಯಬೇಡಿ ಎಂದಿದ್ದಾನೆ. ಈ ಬಗ್ಗೆ ಮಹಿಳೆಯು ರ್ಯಾಪಿಡೋ ಕಂಪನಿಯನ್ನು ಉಲ್ಲೇಖಿಸಿ ಆಕ್ರೋಶ ಹೊರಹಾಕಿದ್ದಾರೆ. ಈ ವರದಿಯಿಂದ ನೆಟ್ಟಿಗರು ಕೋಪಗೊಂಡಿದ್ದಾರೆ, ಅಂತಹ ಚಾಲಕರ ವಿರುದ್ಧ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಪಿಡೊಗೆ ಒತ್ತಾಯಿಸಿದ್ದಾರೆ. ಟ್ವೀಟ್ ವೈರಲ್ ಆದ ನಂತರ ರಾಪಿಡೋ ಕೇರ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ. “ಹಾಯ್, ಚಾಲಕನ ವೃತ್ತಿಪರತೆಯ ಕೊರತೆಯ ಬಗ್ಗೆ ತಿಳಿದುಕೊಳ್ಳುವುದು ನಮಗೆ ಅತ್ಯಂತ ನಿರಾಶಾದಾಯಕವಾಗಿದೆ ಮತ್ತು ನಾವು ಅದರ ಬಗ್ಗೆ ಕ್ಷಮೆಯಾಚಿಸುತ್ತೇವೆ. ಈ ವಿಷಯವನ್ನು ಆದ್ಯತೆಯ ಆಧಾರದ ಮೇಲೆ ಖಂಡಿತವಾಗಿ ಕ್ರಮಕೈಗೊಳ್ಳಲಾಗುವುದು. ದಯವಿಟ್ಟು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ರೈಡ್ ಐಡಿಯನ್ನು ಸಂದೇಶದ ಮೂಲಕ ಹಂಚಿಕೊಳ್ಳುತ್ತೀರಾ?” ಎಂದಿದೆ. shared my location with a captain at @rapidobikeapp and this is what i get???? FUCK YOUR APP FUCK YOUR MEN FUCK MEN pic.twitter.com/EHLqd7lpt5 — husnpari (@behurababe) March 12, 2023