ಮಧ್ಯಪ್ರದೇಶದ ಬಾಗೇಶ್ವರಧಾಮದ ಧೀರೇಂದ್ರ ಶಾಸ್ತ್ರಿ ತಮ್ಮ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಪೀಠಾಧೀಶ್ವರ, ಸದಾ ಒಂದಿಲ್ಲ ಒಂದು ಹೇಳಿಕೆಗಳನ್ನು ಕೊಟ್ಟು ಸುದ್ದಿಯಲ್ಲಿರುವ ಧೀರೇದ್ರ ಶಾಸ್ತ್ರಿ, ಈಗ ಮತ್ತೊಮ್ಮೆ ತಮ್ಮ ಮಾತಿನಿಂದ ಹೊಸ ವಿವಾದವೊಂದನ್ನ ಸೃಷ್ಟಿಸಿದ್ದಾರೆ.
‘ಹಿಂದೂಗಳು ಮೂರರಿಂದ ನಾಲ್ಕು ಮಕ್ಕಳಿಗೆ ಜನ್ಮನೀಡಿ. ಅವರಲ್ಲಿ ಇಬ್ಬರನ್ನ ರಾಮನ ಸೇವೆಗೆ ಬಿಟ್ಟುಬಿಡಿ’ ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ನಡೆದ ರಾಮಚರಿತ್ ಮಾನಸ್ ಮೈದಾನದಲ್ಲಿ ರಾಮನವಮಿಯ ಕಚೇರಿಯ ಉದ್ಘಾಟನೆಯ ಸಮಯದಲ್ಲಿ ಧೀರೇಂದ್ರ ಕೃಷ್ಣ ಶಾಸ್ತ್ರಿ ಈ ಮಾತನ್ನ ಹೇಳಿದ್ದಾರೆ. ಇದೇ ಮಾತು ಈಗ ವಿವಾದಕ್ಕೆ ಗ್ರಾಸವಾಗಿದೆ.
ಮುಂಬರುವ ರಾಮನವಮಿಯ ಕಚೇರಿಯನ್ನು ಉದ್ಘಾಟಿಸಲು ಛಾರ್‌ಪುರದ ಬಾಗೇಶ್ವರ ಧಾಮದ ಪೀಠಾಧೀಶ್ವರ ಪಂಡಿತ್ ಅನ್ನಪೂರ್ಣ ರಾಮಲೀಲಾ ಮೈದಾನಕ್ಕೆ ಆಗಮಿಸಿದ್ದರು. ಪ್ರತಿವರ್ಷದಂತೆ ಈ ವರ್ಷವೂ ರಾಮನವಮಿಗೆಂದೇ ಇಲ್ಲಿ ಅದ್ದೂರಿಯಾಗಿ ತಯಾರಿ ಮಾಡಲಾಗುತ್ತಿದೆ. ಈ ಬಾರಿ ವಿಶೇಷ ಕಚೇರಿಯೊಂದನ್ನ ನಿರ್ಮಾಣ ಮಾಡಲಾಗಿದೆ. ಇದೇ ಕಚೇರಿಯ ಉದ್ಘಾಟನೆಗೆ ಧೀರೇಂದ್ರ ಶಾಸ್ತ್ರಿ ಬಂದಿದ್ದರು.
ಈ ಕಾರ್ಯಕ್ರಮಕ್ಕೆಂದೇ ರಾಮಲೀಲಾ ಅಂಗಳಕ್ಕೆ ಸುಮಾರು 5ಸಾವಿರ ಜನರು ಸೇರಿದ್ದರು. ಈ ಸಂದರ್ಭದಲ್ಲಿ ಪಂಡಿತ್ ಧೀರೇಂದ್ರ ಶಾಸ್ತ್ರಿ, ಹಿಂದೂ ರಾಷ್ಟ್ರ ಕಿ ಜೈʼ ಎಂಬ ಘೋಷಣೆ ಕೂಗಿ ಹೇಳಿದರು. ಜೊತೆಗೆ ಇದೇ ಕಾರ್ಯಕ್ರಮಕ್ಕೆಂದು ಅಳವಡಿಸಲಾಗಿದ್ದ ಬ್ಯಾನರ್ ಗಳಲ್ಲೂ ಹಿಂದೂ ರಾಷ್ಟ್ರದ ಪರ ಘೋಷವಾಕ್ಯಗಳು ಬರೆಯಲಾಗಿತ್ತು.