ಆಸ್ಕರ್ ಮುಡಿಗೇರಿಸಿಕೊಂಡ ʼನಾಟು ನಾಟುʼ ಹವಾ; ವಿದೇಶದ ಪೊಲೀಸರಿಂದಲೂ ಸಿಗ್ನೇಚರ್ ಸ್ಟೆಪ್ ಸಂಭ್ರಮ

ಸುಪ್ರಸಿದ್ಧ ಆರ್ ಆರ್ ಆರ್ ಸಿನಿಮಾದ ಭಾರತೀಯ ಬೀಟ್ ‘ನಾಟು ನಾಟು’ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಕೆಲವೇ ಗಂಟೆಗಳ ನಂತರ, ಪ್ರಪಂಚದಾದ್ಯಂತದ ಜನಸಾಮಾನ್ಯರು ಅದರ ಸಿಗ್ನೇಚರ್ ಸ್ಟೆಪ್ ಹಾಕ್ತಿದ್ದಾರೆ.

ಈ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಅಮೆರಿಕಾ ಪೊಲೀಸರು ಮತ್ತು ನಾಗರಿಕರು RRR ಚಿತ್ರದ ಹಾಡಿನ ನೃತ್ಯವನ್ನು ಆನಂದಿಸುತ್ತಿದ್ದಾರೆ.

ಟೆಕ್ಸಾಸ್ ನಿಂದ ಹೊರಹೊಮ್ಮಿರುವ ವೀಡಿಯೊ ವೈರಲ್ ಆಗಿದೆ. ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಹೋಳಿ ಹಬ್ಬದಲ್ಲಿ ತೊಡಗಿಸಿಕೊಂಡಿರುವ ಸಾಮಾನ್ಯ ನಾಗರಿಕರು ಮತ್ತು ಪೊಲೀಸರು ನಾಟು ನಾಟು ಹಾಡಿಗೆ ನೃತ್ಯ ಮಾಡಿದ್ದಾರೆ.

RRR ಸಿನಿಮಾದ ಹಾಡು ನಾಟು ನಾಟು ಆಸ್ಕರ್ 2023 ರಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ.

ರಿಹಾನ್ನಾ, ಲೇಡಿ ಗಾಗಾ ಮತ್ತು ಇತರ ಸಹ ನಾಮನಿರ್ದೇಶಿತರನ್ನು ಸೋಲಿಸಿ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಮತ್ತು ಸಾಹಿತಿ ಚಂದ್ರಬೋಸ್ ಟ್ರೋಫಿಯನ್ನು ಸ್ವೀಕರಿಸಿದರು.

https://www.youtube.com/watch?v=vyZHQNszGws&embeds_euri=https%3A%2F%2Fwww.freepressjournal.in%2F&feature=emb_logo

https://twitter.com/Nenavat_Jagan/status/1634501517347811328?ref_src=twsrc%5Etfw%7Ctwcamp%5Etweetembed%7Ctwterm%5E1634753853894848512%7Ctwgr%5Ec969abd53cf13ad7561fb37d1009ec92cc8eb64c%7Ctwcon%5Es2_&ref_url=https%3A%2F%2Fwww.freepressjournal.in%2Fviral%2Fwatch-not-california-viral-video-showing-policemen-and-civilians-enjoying-oscar-winning-beat-naatu-naatu-goes-viral-from-texas

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read