
ಬಾಲಿವುಡ್ ನಟ ಶಾರುಖ್ ಖಾನ್ ಅವರು ಬಹಳ ವರ್ಷಗಳ ಹಿಂದೆ ಜರ್ಮನ್ ಮಹಿಳೆಯೊಂದಿಗೆ ಕ್ಯಾಶುಯಲ್ ಚಾಟ್ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಭಾರತದಲ್ಲಿ ಪ್ರಾಜೆಕ್ಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಜರ್ಮನ್ ಮಹಿಳೆಯೊಂದಿಗೆ ನಟ ಮಾತನಾಡುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು.
ಸಂಭಾಷಣೆಯ ಸಮಯದಲ್ಲಿ, ಶಾರುಖ್ ಖಾನ್ ಅವರು ‘ದಿಲ್ ತೋ ಪಾಗಲ್ ಹೈ’ ವೀಕ್ಷಿಸಿದ ಮತ್ತು ಭಾರತೀಯ ಚಲನಚಿತ್ರಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಇನ್ನೊಬ್ಬ ಜರ್ಮನ್ ಮಹಿಳೆಯ ಬಗ್ಗೆ ಮಹಿಳೆಗೆ ತಿಳಿಸಿದರು.
ಶಾರುಖ್ ಅವರು, ತಾವು ಹೆಚ್ಚು ಜರ್ಮನ್ ಚಲನಚಿತ್ರಗಳನ್ನು ನೋಡಿಲ್ಲ ಎಂದು ಹೇಳಿದ್ದು ಮತ್ತು ಮುಂದಿನ ಬಾರಿ ಮಹಿಳೆ ಬಂದಾಗ ಕೆಲವು ಜರ್ಮನ್ ಚಲನಚಿತ್ರಗಳನ್ನು ತರಲು ಹೇಳಿದ್ದರು.
ಎರಡು ನಿಮಿಷಗಳ ಅವಧಿಯ ಕ್ಲಿಪ್ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ಶಾರುಖ್ ಅಭಿಮಾನಿಗಳು ಸಂತಸದಲ್ಲಿ ತೇಲಿದ್ದಾರೆ. ಈ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ Yoongienthusias ಅವರು ಪೋಸ್ಟ್ ಮಾಡಿದ್ದಾರೆ. ಶಾರುಖ್ ಅಭಿಮಾನಿಗಳಿಂದ ಅಭಿನಂದನೆ, ಖುಷಿಯ ಕಮೆಂಟ್ಗಳ ಸುರಿಮಳೆಯಾಗುತ್ತಿದೆ.