ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುತ್ತಾರೆ. ಅಲ್ಲೊಂದು ಇಲ್ಲೊಂದು ಉದಾಹರಣೆಗಳು ಇದಕ್ಕೆ ವಿರೋಧವಾಗಿದ್ದರೂ, ಮನುಷ್ಯರೇ ಇರಲಿ, ಪಶು-ಪಕ್ಷಿಗಳೇ ಇರಲಿ ತಾಯಿಯ ಪ್ರೀತಿಗೆ ಪರ್ಯಾಯವೇ ಇಲ್ಲ. ತನಗೆ ಏನೇ ಕಷ್ಟ ಬಂದರೂ ಮಕ್ಕಳನ್ನು ಸುರಕ್ಷಿತವಾಗಿ ಇಡಲು ತಾಯಿ ನೋಡುತ್ತಾಳೆ.
ಅದಕ್ಕೊಂದು ಉದಾಹರಣೆ ಈ ಕೋಳಿಯ ವಿಡಿಯೋ. ಇದನ್ನು ಐಎಎಸ್ ಅಧಿಕಾರಿ ಡಾ ಸುಮಿತಾ ಮಿಶ್ರಾ ಹಂಚಿಕೊಂಡಿದ್ದಾರೆ. ಭಾರೀ ಮಳೆಯಿಂದ ಕೋಳಿಯೊಂದು ತನ್ನ ಮಕ್ಕಳನ್ನು ರಕ್ಷಿಸುವ ಭಾವಪೂರ್ವಕ ವಿಡಿಯೋ ಇದಾಗಿದೆ.
99k ವೀಕ್ಷಣೆಗಳನ್ನು ಹೊಂದಿರುವ ವೀಡಿಯೊದಲ್ಲಿ ತಾಯಿ ಕೋಳಿ ತನ್ನ ಗರಿಗಳ ಕೆಳಗೆ ತನ್ನ ಮಕ್ಕಳನ್ನು ರಕ್ಷಿಸುತ್ತಿರುವುದನ್ನು ತೋರಿಸುತ್ತದೆ. ಮಳೆ ಜೋರಾಗಿ ಸುರಿಯುತ್ತಿರುವ ಸಂದರ್ಭದಲ್ಲಿ ತನ್ನ ಏಳೆಂಟು ಮರಿಗಳನ್ನು ಗರಿಗಳ ಒಳಗೆ ಸೇರಿಸಿಕೊಳ್ಳುವ ಅಮ್ಮ, ತಾನು ಮಾತ್ರ ಮಳೆಯಲ್ಲಿ ನೆನೆಯುತ್ತದೆ.
ಕೆಲ ಹೊತ್ತಿನ ಬಳಿಕ ರಸ್ತೆ ಬದಿಗೆ ಹೋಗುವ ಅದು ಮರಿಗಳನ್ನು ಅತ್ತ ತಳ್ಳಿ ಅವುಗಳಿಗೆ ಮಳೆ ಬೀಳದಂತೆ ನೋಡಿಕೊಳ್ಳುತ್ತದೆ.
ಅಮ್ಮನ ಪ್ರೀತಿಗೆ ನೆಟ್ಟಿಗರು ಭಾವುಕರಾಗಿದ್ದಾರೆ. ತಮ್ಮ ಅಮ್ಮನ ಕುರಿತು ಹಲವು ಮಂದಿ ಶೇರ್ ಮಾಡಿಕೊಂಡಿದ್ದಾರೆ.