ಇಡ್ಲಿ ‘ರುಚಿಯಿಲ್ಲದ ಬಿಳಿ ಸ್ಪಂಜು’ ಎಂದ ನಟನ ವಿರುದ್ಧ ನೆಟ್ಟಿಗರು ಕಿಡಿ

ದೇಶದ ವಿವಿಧ ಭಾಗಗಳ ಪಾಕಪದ್ಧತಿಯ ವಿಷಯಕ್ಕೆ ಬಂದಾಗ, ಅಂತ್ಯವಿಲ್ಲದ ಚರ್ಚೆ ನಡೆಯುತ್ತದೆ. ಜನರು ತಮ್ಮ ಪಾಕಪದ್ಧತಿಯ ಬಗ್ಗೆ ಪ್ರೀತಿ ವ್ಯಕ್ತಪಡಿಸುತ್ತಾರೆ. ಯಾರಾದರೂ ತಮ್ಮ ಪಾಕ ವಿಧಾನದ  ವಿರುದ್ಧ ಮಾತನಾಡಿದರೆ ಸಿಟ್ಟಿಗೇಳುತ್ತಾರೆ. ಈಗ ಅಂಥದ್ದೇ ವಿಷಯವೊಂದು ಚರ್ಚೆಯಾಗುತ್ತಿದೆ.

ಹಾಸ್ಯನಟ ಗೋವಿಂದ್ ಮೆನನ್ ಅವರು ದಕ್ಷಿಣ ಭಾರತದ ಜನಪ್ರಿಯ ತಿಂಡಿ ಇಡ್ಲಿಯ ಬಗ್ಗೆ ಹೇಳಿಕೊಂಡಿದ್ದು, ಇದು ನೆಟ್ಟಿಗರನ್ನು ಆಕ್ರೋಶಕ್ಕೆ ತಳ್ಳಿದೆ.

ಮೆನನ್ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಇಡ್ಲಿ ಎಂಬುದು ‘ರುಚಿಯಿಲ್ಲದ ಬಿಳಿ ಸ್ಪಂಜು’ ಎಂದು ಹೇಳಿದ್ದಾರೆ. ಇಡ್ಲಿಗೆ ಯಾವುದೇ ಟೇಸ್ಟ್​ ಇಲ್ಲ. ಅದು ಸಾಂಬಾರ್‌ನೊಂದಿಗೆ ಹೆಚ್ಚು ರುಚಿಯಾಗಿರುತ್ತದೆ ಅಷ್ಟೇ ಎಂದಿದ್ದಾರೆ. ಸಾಂಬಾರ್​ ಚೆನ್ನಾಗಿದ್ದರೆ ಇಡ್ಲಿಯೂ ಚೆನ್ನಾಗಿರುತ್ತದೆ ಎಂದಿದ್ದಾರೆ.

ಇದಕ್ಕೆ ಕೆಲವು ನೆಟ್ಟಿಗರು ಹೌದು ಎಂದು ಕಮೆಂಟ್​ ಮಾಡಿದ್ದರೆ, ಕೆಲವರು ತಮ್ಮ ಆಹಾರ ಪದ್ಧತಿಯ ಬಗ್ಗೆ ಟೀಕೆ ಮಾಡಿದ್ದಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪೋಸ್ಟ್ ಸುಮಾರು 600k ವೀಕ್ಷಣೆಗಳನ್ನು ಹೊಂದಿದ್ದು, ಹಲವರು ನಟನ ವಿರುದ್ಧ ಕಮೆಂಟ್​ ಹಾಕುತ್ತಿದ್ದಾರೆ.

https://youtu.be/U-jjbg2CsKk

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read