ಈ ಗ್ರಾಮಕ್ಕೆ ವಾಹನ ತೆಗೆದುಕೊಂಡು ಹೋಗುವ ಮುನ್ನ ಹುಷಾರ್ ! ಇಂದು ರಸ್ತೆಗಳಲ್ಲಿ ಭಾಗಶಃ ವಾಹನ ಅಪಘಾತಗಳು ಅತಿಯಾದ ವೇಗದಿಂದ ಸಂಭವಿಸುತ್ತವೆ. ಇದೇ ಕಾರಣಕ್ಕಾಗಿ ಸಂಚಾರಿ ಪೊಲೀಸ್ ವಿಭಾಗ ಅನೇಕ ಕಟ್ಟುನಿಟ್ಟಿನ ನಿಯಮ ಜಾರಿ ತಂದಿದೆ.
ಆದರೂ ವಾಹನ ಚಾಲಕರು ನಿರ್ಲಕ್ಷ್ಯ ಮಾಡುತ್ತಿದ್ದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಇಂತಹ ಚಾಲಕರಿಗೆಂದೇ ನಾಗಾಲ್ಯಾಂಡ್‌ನ ಗ್ರಾಮವೊಂದರ ಜನರು ಹೊಸ ಉಪಾಯವೊಂದನ್ನ ಮಾಡಿದ್ದಾರೆ.
ಅದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೆ ಅಲ್ಲ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಕೂಡ ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಅದನ್ನ ಶೇರ್ ಮಾಡಿಕೊಂಡಿದ್ದಾರೆ.
ಈ ಬೋರ್ಡ್ ನೋಡಿದ್ರಾ..!! ನೋಡಿದ್ರೆ ಒಂದೆರಡು ಕ್ಷಣ ಅವಾಕ್ಕಾಗಿ ಹೋಗ್ತಿರಾ ಅಲ್ವಾ ! ಈ ಬೋರ್ಡ್‌ಲ್ಲಿ ಬರೆದಿದ್ದನ್ನ ಓದಿದ್ರಾ, ‘ನಿಧಾನವಾಗಿ ವಾಹನದಲ್ಲಿ ಸಾಗಿ, ಈ ಗ್ರಾಮದ ಸೌಂದರ್ಯವನ್ನ ಸವಿಯಿರಿ, ವೇಗವಾಗಿ ವಾಹನ ಓಡಿಸಿ, ಆಗ ನೋಡಿ ನಮ್ಮ ನಿರ್ಧಾರ ಏನು ಅಂತ’ ಇದು ತಮಾಷೆ ರೀತಿಯಲ್ಲಿ ಇದ್ದರೂ ವಾಹನ ಚಾಲಕರಿಗೆ ವಾರ್ನಿಂಗ್ ಕೊಟ್ಟ ಹಾಗಿದೆ.
ಇದೇ ಸೈನ್ ಬೋರ್ಡ್‌ನ ಚಿತ್ರವನ್ನ ನಾಗಾಲ್ಯಾಂಡ್ ಸಚಿವರು ಶೇರ್ ಮಾಡಿಕೊಂಡಿದ್ದು ಅದಕ್ಕೆ ‘ಶೀರ್ಷಿಕೆ ಅದ್ಭುತವಾಗಿದೆ ಗ್ರಾಮಸ್ಥರ ಈ ಸೃಜನಶೀಲತೆ, ಇದು ಅವಶ್ಯಕವಾಗಿದೆ ಕೂಡ’ಎಂದು ಬರೆದುಕೊಂಡಿದ್ದಾರೆ.
ಈ ಫೋಟೋ ನೋಡಿ ನೆಟ್ಟಿಗರೊಬ್ಬರು, ’ಮನಾಲಿಯಲ್ಲೂ ಈ ರೀತಿಯ ವಿಭಿನ್ನ ರೀತಿಯ ಬೋರ್ಡ್‌ನ್ನ ನಾನು ನೋಡಿದ್ದೇನೆ. ಅಲ್ಲಿ ಮದ್ಯಪಾನ ಮಾಡಿ ವಾಹನವನ್ನ ಓಡಿಸಬೇಡಿ, ಮನಾಲಿ ಜೈಲುಗಳು ತುಂಬಾ ತಂಪಾಗಿವೆ’ ಎಂದು ಬರೆಯಲಾಗಿತ್ತು.
ಇನ್ನೊಬ್ಬರು ಈ ಬೋರ್ಡ್ ನೋಡಿ ಸಿಟ್ಟಾಗಿ ’ಸರಿ ನಾವು ಈ ಊರಿಗೆ ಬರುವ ಕಷ್ಟವೇ ತೆಗೆದುಕೊಳ್ಳುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.
ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್, ಟ್ವಿಟ್ಟರ್‌ನಲ್ಲಿ, ಆಸಕ್ತಿಕರ ವಿಡಿಯೋ ಅಥವಾ ಚಿತ್ರಗಳನ್ನ ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅವುಗಳಲ್ಲಿ ಇದು ಕೂಡಾ ಒಂದಾಗಿದೆ.