BREAKING: ಹೋಳಿ ಆಚರಣೆ ವೇಳೆ ಜಪಾನಿ ಯುವತಿಗೆ ಕಿರುಕುಳ ನೀಡಿದ್ದ ಮೂವರು ಅರೆಸ್ಟ್

ಹೋಳಿ ಹಬ್ಬ ಆಚರಣೆ ವೇಳೆ ಜಪಾನಿನ ಮಹಿಳೆಗೆ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಸೇರಿದಂತೆ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪೋಲೀಸರ ಪ್ರಕಾರ, ಜಪಾನಿನ ಮಹಿಳೆಗೆ ಹೋಳಿ ಸಮಯದಲ್ಲಿ ಬಣ್ಣ ಹಚ್ಚುವ ನೆಪದಲ್ಲಿ ಹುಡುಗರ ಗುಂಪೊಂದು ಕಿರುಕುಳ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಆ ಹುಡುಗರಿಗಾಗಿ ಹುಡುಕಾಟ ನಡೆಸಲಾಗಿತ್ತು.

ಕ್ಷೇತ್ರ ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯ ಗುಪ್ತಚರರ ಮೂಲಕ ತೀವ್ರ ಪ್ರಯತ್ನದ ನಂತರ ವೀಡಿಯೊದಲ್ಲಿ ಕಂಡುಬಂದಿದ್ದ ಹುಡುಗರನ್ನು ಗುರುತಿಸಲಾಗಿದೆ. ಓರ್ವ ಅಪ್ರಾಪ್ತ ಸೇರಿದಂತೆ ಮೂವರು ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ನಡೆದ ಘಟನೆ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೆಹಲಿಯ ಪಹರ್‌ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಮೊದಲು ಮಹಿಳೆ ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿ ನಂತರ ಡಿಲೀಟ್ ಮಾಡಿದ್ರು.
ಅವರ ಇತ್ತೀಚಿನ ಟ್ವೀಟ್ ಪ್ರಕಾರ, ಅವರು ಪ್ರಸ್ತುತ ಬಾಂಗ್ಲಾದೇಶದಲ್ಲಿದ್ದಾರೆ.

ಹೇಳಿಕೆಯ ಪ್ರಕಾರ, ಮಹಿಳೆ ದೆಹಲಿ ಪೊಲೀಸರಿಗೆ ಅಥವಾ ಜಪಾನ್ ರಾಯಭಾರ ಕಚೇರಿಗೆ ಯಾವುದೇ ದೂರು ನೀಡಿಲ್ಲ.

https://twitter.com/SwatiJaiHind/status/1634128661786886150?ref_src=twsrc%5Etfw%7Ctwcamp%5Etweetembed%7Ctwterm%5E1634128661786886150%7Ctwgr%5E8b78e6989ae458ba58202872fbd297e4a51b7828%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Fjapanese-woman-harassed-holi-delhi-paharganj-juvenile-three-held-delhi-police-2345128-2023-03-11

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read