BIG NEWS: ಅತ್ಯಾಚಾರ ಆರೋಪಿ ಮನೆ ಮೇಲೆ ಮಹಿಳಾ ಪೊಲೀಸರಿಂದ ಬುಲ್ಡೋಜರ್ ಕಾರ್ಯಾಚರಣೆ 11-03-2023 8:13AM IST / No Comments / Posted In: Latest News, India, Live News ಮಹಿಳಾ ಪೊಲೀಸರ ಗುಂಪೊಂದು ಮಧ್ಯಪ್ರದೇಶದಲ್ಲಿ ಅತ್ಯಾಚಾರ ಆರೋಪಿಯ ಮನೆಯನ್ನ ಬುಲ್ಡೋಜರ್ನಿಂದ ಕೆಡವಿ ಹಾಕಿದೆ. ಬಿಜೆಪಿ ಆಡಳಿತದ ರಾಜ್ಯದಲ್ಲಿ ಬುಲ್ಡೋಜರ್ ಕಾರ್ಯಾಚರಣೆಗೆ ಇದು ಮತ್ತೊಂದು ತಾಜಾ ಉದಾಹರಣೆ. ತಂಡದ ನೇತೃತ್ವ ವಹಿಸಿದ್ದ ಅಧಿಕಾರಿ ಅತ್ಯಾಚಾರ ಘೋರ ಅಪರಾಧ ಮತ್ತು ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಇಂತಹ ಕ್ರಮಗಳು ಶಿಕ್ಷೆಗೆ ಅರ್ಹವಾಗಿವೆ ಎಂದು ಹೇಳಿದರು. ರಾಜಧಾನಿ ಭೋಪಾಲ್ನಿಂದ ಸುಮಾರು 250 ಕಿಮೀ ದೂರದಲ್ಲಿರುವ ದಾಮೋಹ್ನಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು ನಾಲ್ಕನೆಯವನಾದ ಕೌಶಲ್ ಕಿಶೋರ್ ಚೌಬೆ ಪರಾರಿಯಾಗಿದ್ದಾನೆ. ಆರೋಪಿ ಆಕ್ರಮಿತ ಜಮೀನಿನಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದ. ಹೀಗಾಗಿ ಮನೆ ಕೆಡವಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ವ್ಯಕ್ತಿ ಪರಾರಿಯಾಗಿದ್ದಾನೆ. ಕೌಶಲ್ ಕಿಶೋರ್ ಚೌಬೆ ಅಕ್ರಮವಾಗಿ ಭೂಮಿಯನ್ನು ವಶಪಡಿಸಿಕೊಂಡಿದ್ದ. ಮಹಿಳಾ ಅಧಿಕಾರಿಗಳ ಗುಂಪಿನಿಂದ ಮನೆಯ ಮೇಲೆ ಬುಲ್ಡೋಜರ್ ಕಾರ್ಯನಿರ್ವಹಿಸುತ್ತಿದೆ. ಮಹಿಳಾ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ ಮತ್ತು ಇಂತಹ ಕ್ರಮಗಳು ಮುಂದುವರೆಯಬೇಕು” ಎಂದು ರಾಣೆ ಪೊಲೀಸ್ ಠಾಣಾಧಿಕಾರಿ ಪ್ರಶಿತಾ ಕುರ್ಮಿ ಹೇಳಿದ್ದಾರೆ. Video: Madhya Pradesh Women Cops Bulldoze Home Of Rape-Accused https://t.co/yYXAdfxJO6 pic.twitter.com/JrKgf28pge — NDTV (@ndtv) March 10, 2023