alex Certify ದೇಶದಲ್ಲೇ ಮೊದಲ ಬಾರಿಗೆ ಮಾನವರಹಿತ ಟೇಕ್ ಅವೇ ಆರ್ಡರ್ ಕೇಂದ್ರ; ಸ್ಟಾರ್ಟ್ ಅಪ್ ಕಂಪೆನಿಯಿಂದ ಸ್ಥಾಪನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದಲ್ಲೇ ಮೊದಲ ಬಾರಿಗೆ ಮಾನವರಹಿತ ಟೇಕ್ ಅವೇ ಆರ್ಡರ್ ಕೇಂದ್ರ; ಸ್ಟಾರ್ಟ್ ಅಪ್ ಕಂಪೆನಿಯಿಂದ ಸ್ಥಾಪನೆ

ಭಾರತದಲ್ಲಿ ಮೊದಲ ಬಾರಿಗೆ ಚೆನ್ನೈ ಮೂಲದ ಸ್ಟಾರ್ಟ್‌ಅಪ್ ಕೊಳತ್ತೂರಿನಲ್ಲಿ ವಿಶಿಷ್ಟವಾದ ಮಾನವರಹಿತ ಟೇಕ್‌ಅವೇ ಆರ್ಡರ್ ಮಾಡುವ ಕೇಂದ್ರವನ್ನು ನಿರ್ಮಿಸಿದೆ. ಕಂಪನಿಯು, ಬಾಯಿ ವೀಟು ಕಲ್ಯಾಣಂ ಅಥವಾ ದಿ ಬಿವಿಕೆ ಬಿರಿಯಾನಿ, ಕಲ್ಲಿದ್ದಲು ಮತ್ತು ಸೌದೆ ಬಳಸಿ ತಯಾರಿಸಿದ ಅಧಿಕೃತ ಪ್ರೀಮಿಯಂ ಮದುವೆಯ ಶೈಲಿಯ ಬಿರಿಯಾನಿಯನ್ನು ಒದಗಿಸುತ್ತದೆ.

ಚೆನ್ನೈನಲ್ಲಿರುವ ಅದರ ಪಾಪ್ ಶಾಪ್ 32-ಇಂಚಿನ ಸ್ಕ್ರೀನ್‌ಗಳನ್ನು ಹೊಂದಿದೆ. ಅಲ್ಲಿ ಗ್ರಾಹಕರು ತಮ್ಮ ಮೆನುವನ್ನು ಬ್ರೌಸ್ ಮಾಡಬಹುದು, ಆರ್ಡರ್‌ಗಳನ್ನು ಮಾಡಬಹುದು ಮತ್ತು QR ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅಥವಾ ಕಾರ್ಡ್‌ಗಳನ್ನು ಬಳಸುವ ಮೂಲಕ ಹಣ ಪಾವತಿಗಳನ್ನು ಮಾಡಬಹುದು. ಇವೆಲ್ಲವೂ ಕೇವಲ ಕ್ಷಣಾರ್ಧದಲ್ಲಿ.

ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿರುವ ವಿಡಿಯೋದಲ್ಲಿ ಗ್ರಾಹಕರು ಆಹಾರ ಬುಕ್ ಮಾಡಿದ ನಾಲ್ಕೈದು ನಿಮಿಷದಲ್ಲಿ ಊಟವನ್ನು ತೆಗೆದುಕೊಂಡು ಹೋಗಬಹುದು.

ಟೇಕ್‌ಅವೇ ಕೇಂದ್ರದಲ್ಲಿ ಹೆಚ್ಚು ಸಮಯ ಕಾಯುವಿಕೆಯಾಗಲೀ, ಫುಡ್ ಆರ್ಡರ್ ನ ವಿವರಿಸಲಾಗಲೀ ಯಾವುದೇ ವ್ಯಕ್ತಿಯ ಅಗತ್ಯವಿಲ್ಲ. ಆರ್ಡರ್ ಮಾಡಿದ ಕೇವಲ ನಾಲ್ಕು ನಿಮಿಷದಲ್ಲಿ ಮಾನವರಹಿತವಾಗಿ ಆಹಾರ ಗ್ರಾಹಕರ ಕೈಗೆ ಸೇರುತ್ತದೆ.

ಬಿಕೆವಿಯ ಮೆನುವಿನಲ್ಲಿ ಮಟನ್ ಪಾಯ, ಇಡಿಯಪ್ಪಂ, ಪರೋಟಾ ಮತ್ತು ಹಲ್ವಾ ಸೇರಿದಂತೆ ಇತರ ಭಕ್ಷ್ಯಗಳಿವೆ. ಬಿಕೆವಿಯ ಬಿರಿಯಾನಿ ಬೆಲೆ ಕನಿಷ್ಠ 220 ರಿಂದ ಗರಿಷ್ಟ 449 ರೂ.ವರೆಗಿದೆ.

ಕಂಪನಿಯು ಈಗ ಚೆನ್ನೈನಾದ್ಯಂತ 60 ನಿಮಿಷಗಳ ವಿತರಣೆಯನ್ನು ನೀಡಲು ಭರವಸೆ ನೀಡಿದೆ. ಅದರ ಸ್ಥಾಪಕ ಮತ್ತು ಸಿಇಒ ಫಹೀಮ್ ಎಸ್ ಪ್ರಕಾರ ಕಂಪನಿ ಚೆನ್ನೈನಾದ್ಯಂತ 12 ಅಂತಹ ಕೇಂದ್ರಗಳನ್ನು ಪ್ರಾರಂಭಿಸಲು ಯೋಜಿಸಿದೆ ಮತ್ತು ನಂತರ ಅದರ ಕಾರ್ಯಾಚರಣೆಯನ್ನು ಭಾರತದಾದ್ಯಂತ ವಿಸ್ತರಿಸಲು ಯೋಜಿಸಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...