![](https://kannadadunia.com/wp-content/uploads/2023/03/AA18sCrI.jpg)
ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಚಿರತೆಯೊಂದು ಎಮ್ಮೆಗಳ ದಾಳಿಗೆ ಬೆದರಿ ಓಡಿಹೋಗಿ ಪೊದೆಯಲ್ಲಿ ಕಣ್ಮರೆಯಾಗುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಚಿರತೆಯನ್ನ ಹಲವಾರು ಎಮ್ಮೆಗಳು ಅಟ್ಟಿಸಿಕೊಂಡು ಹೋಗುತ್ತಿರುವುದನ್ನು ಚಿತ್ರೀಕರಿಸಲಾಗಿದೆ. ಮೊದಲು ಚಿರತೆ ಎಮ್ಮೆಯೊಂದರ ಮೇಲೆ ದಾಳಿ ಮಾಡಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ಸ್ಥಳೀಯರೊಬ್ಬರು ಸೆರೆಹಿಡಿದ ವೀಡಿಯೊದಲ್ಲಿ ಬಲ್ಲಾರ್‌ಪುರ ಇಂಡಸ್ಟ್ರೀಸ್ ಲಿಮಿಟೆಡ್ (ಬಿಐಎಲ್‌ಟಿ) ಬಳಿಯ ನಿರ್ಜನ ಹಾದಿಯಲ್ಲಿ ಕೆಲವು ಎಮ್ಮೆಗಳು ಹಾದುಹೋಗುತ್ತಿರುವ ವೇಳೆ ಚಿರತೆಯೊಂದು ಎಮ್ಮೆಯೊಂದರ ಮೇಲೆ ದಾಳಿ ಮಾಡುತ್ತದೆ. ಬಳಿಕ ಎಮ್ಮೆಗಳ ಗುಂಪು ಚಿರತೆಯ ಹಿಂದೆ ಓಡುತ್ತಿದ್ದಂತೆ ಚಿರತೆ ಪೊದೆ ಕಡೆ ಓಡಿಹೋಗುತ್ತದೆ.