BIG NEWS: ನನ್ನ ಬೆಂಬಲ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ; ಸಂಸದೆ ಸುಮಲತಾ ಘೋಷಣೆ

ಮಂಡ್ಯ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿವೆ. ಮಂಡ್ಯ ಜಿಲ್ಲೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಸಾಕಷ್ಟು ಸಹಕಾರ ನೀಡಿದೆ. ದೇಶದಲ್ಲಿ ಅಭಿವೃದ್ಧಿ ಆಗುತ್ತಿರುವುದು ಕೂಡ ಪ್ರಧಾನಿ ಮೋದಿ ನಾಯಕತ್ವದಲ್ಲಿ ಎಂದು ಸಂಸದೆ ಸುಮಾಲತಾ ಶ್ಲಾಘಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಮಲತಾ, ನಾಲ್ಕು ವರ್ಷಗಳಲ್ಲಿ ನಾನು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಕೇಂದ್ರ ಸರ್ಕಾರದ ಹಲವು ಯೋಜನೆಗಳಲ್ಲಿ ನನಗೆ ಅವಕಾಶ ಕೊಟ್ಟಿದೆ. ಪಕ್ಷೇತರ ಸಂಸದೆಯಾಗಿದ್ದರೂ ಕೂಡ ಕೇಂದ್ರ ಸರ್ಕಾರ ಅನುದಾನ ನೀಡಿದೆ. ಜಿಲ್ಲೆಯ ಭ್ಯವಿಷ್ಯ ದೃಷ್ಟಿಯಿಂದ, ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ನಾನು ಕೆಲ ನಿರ್ಧಾರವನ್ನು ಮಾಡಲೇಬೇಕಾದ ಸಮಯ ಬಂದಿದೆ. ಜಿಲ್ಲೆಯ ಭವಿಷ್ಯಕ್ಕಾಗಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದೇನೆ ಎಂದರು.

ಮಂಡ್ಯ ಜಿಲ್ಲೆಗೆ ಅಭಿವೃದ್ಧಿ ಬದಲಾವಣೆ ತರುವ ಸಂದರ್ಭದಲ್ಲಿ ನನಗೆ ಶಕ್ತಿ ಬೇಕಿದೆ. ಹಲವು ನಾಯಕರು ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ನೀವು ಪಕ್ಷಕ್ಕೆ ಬಂದರೆ ಬಲ ಬರುತ್ತೆ ಎಂದಿದ್ದಾರೆ. ಆದರೆ ಜಿಲ್ಲೆಯ ಅಭಿವೃದ್ಧಿಗಾಗಿ ನಾನು ಕೆಲ ನಿರ್ಧಾರಗಳನ್ನು ಮಾಡಿದ್ದೇನೆ ಎಂದರು.

ಚಾಮುಂಡಿ ತಾಯಿ ಮೇಲಾಣೆ ನಾವು ಕುಟುಂಬ ರಾಜಕಾರಣ ಮಾಡಲ್ಲ, ಅಂಬರಿಶ್ ಆಗಲಿ, ನಾನಾಗಲಿ, ಅಭಿಷೇಕ್ ಆಗಲಿ ಕುಟುಂಬ ರಾಜಕಾರಣ ಮಾಡಲ್ಲ. ನಾನು ರಾಜಕಾರಣದಲ್ಲಿ ಇರುವವರೆಗೂ ಅಭಿಷೇಕ್ ರಾಜಕಾರಣಕ್ಕೆ ಬರಲ್ಲ. ಅಭಿಷೇಕ್ ನಿಲ್ಲುವುದಾದರೆ ಮಂಡ್ಯದಿಂದಲೇ ಟಿಕೆಟ್ ಕೊಡುವುದಾಗಿ ಎರಡು ಪಕ್ಷದಿಂದ ಆಹ್ವಾನ ಬಂದಿತ್ತು. ಆದರೆ ನಾನು ಅಭಿಷೇಕ್ ಸಧ್ಯಕ್ಕೆ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಅಭಿಷೇಕ್ ರಾಜಕಾರಣದ ಬಗ್ಗೆ ನಾನು ಎಲ್ಲಿಯೂ ಮಾತನಾಡಿಲ್ಲ. ಅಭಿಷೇಕ್ ರಾಜಕಾರಣಕ್ಕೆ ಹೆಜ್ಜೆ ಇಡಲ್ಲ ಎಂದು ತಿಳಿಸಿದರು.

ಇದೇ ವೇಳೆ ಇಂದಿನಿಂದ ನನ್ನ ಸಂಪೂರ್ಣ ಬೆಂಬಲವನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಘೋಷಣೆ ಮಾಡುತ್ತಿದ್ದೇನೆ. ದೇಶ ಪ್ರಗತಿಯನ್ನು ಸಾಧಿಸುತ್ತಿದೆ. ದೇಶ ವಿದೇಶಗಳಲ್ಲಿಯೂ ನಾನು ಭಾರತೀಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡುತ್ತಿರುವುದು ಪ್ರಧಾನಿ ಮೋದಿಯವರು. ಆ ನಿಟ್ಟಿನಲ್ಲಿ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಹಾಗಾಗಿ ನನ್ನ ಬೆಂಬಲ ಪ್ರಧಾನಿ ಮೋದಿ ಸರ್ಕಾರಕ್ಕೆ ಎಂದು ತಿಳಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read