ರಿಲಯನ್ಸ್​ನಿಂದ ಐಕಾನಿಕ್ ಪಾನೀಯ ಬ್ರಾಂಡ್ ಕ್ಯಾಂಪಾ ಬಿಡುಗಡೆ

ನವದೆಹಲಿ: ಉದ್ಯಮಿ ಮುಖೇಶ್​ ಅಂಬಾನಿ ಅವರ, ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್‌)ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಹಾಗೂ ಎಫ್‌ಎಂಸಿಜಿ ಘಟಕವಾಗಿರುವ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್‌) ಐಕಾನಿಕ್ ಪಾನೀಯ ಬ್ರಾಂಡ್ ಕ್ಯಾಂಪಾವನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಕುರಿತು ಕಂಪೆನಿ ಹೇಳಿಕೆ ನಿಡಿದೆ.

ಈ ಬ್ರಾಂಡ್‌ಗೆ ಮರುಚಾಲನೆ ನೀಡುವುದು, ಸುದೀರ್ಘ ಪರಂಪರೆ ಹೊಂದಿರುವ ಹಾಗೂ ವಿಶಿಷ್ಟ ಅಭಿರುಚಿ ಮತ್ತು ಸುವಾಸನೆಯಿಂದಾಗಿ ಭಾರತೀಯ ಗ್ರಾಹಕರಲ್ಲಿ ಮನೆಮಾತಾಗಿರುವ ಸ್ವದೇಶಿ ಬ್ರಾಂಡ್‌ಗಳನ್ನು ಉತ್ತೇಜಿಸುವ ಕಂಪನಿಯ ಕಾರ್ಯತಂತ್ರದ ಭಾಗವಾಗಿದೆ ಎಂದು ಕಂಪೆನಿ ಹೇಳಿದೆ. ಇದರಿಂದ ವಿದೇಶಿ ಕಂಪೆನಿ ಪೆಪ್ಸಿ, ಕೋಕಾಕೋಲಾ ಹಿಂದೆ ಹೋಗುವ ಸಾಧ್ಯತೆಗಳು ಇವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆರಂಭದಲ್ಲಿ ಕ್ಯಾಂಪಾ ವಿಭಾಗದಲ್ಲಿ ಕ್ಯಾಂಪಾ ಕೋಲಾ, ಕ್ಯಾಂಪಾ ಲೆಮನ್ ಮತ್ತು ಕ್ಯಾಂಪಾ ಆರೆಂಜ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ಅದು ತಿಳಿಸಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಕ್ಯಾಂಪಾವನ್ನು ಮರಳಿ ತರಲು ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ. ಇದು ನಮ್ಮ ವಿಸ್ತರಿಸುತ್ತಿರುವ ಎಫ್‌ಎಂಸಿಜಿ ವ್ಯವಹಾರದಲ್ಲಿ ಮತ್ತೊಂದು ದಿಟ್ಟ ಹೆಜ್ಜೆಯಾಗಿದೆ,” ಎಂದು ಆರ್‌ಸಿಪಿಎಲ್ ವಕ್ತಾರರು ಹೇಳಿದ್ದಾರೆ.

https://twitter.com/mkrushna/status/1633782561595084800?ref_src=twsrc%5Etfw%7Ctwcamp%5Etweetembed%7Ctwterm%5E1633782561595084800%7Ctwgr%5E62489060719ed65951d6a69ea2e80784ac67611b%7Ctwcon%5Es1_&ref_url=https%3A%2F%2Fwww.freepressjournal.in%2Fbusiness%2Fmukesh-ambanis-reliance-brings-back-iconic-campa-cola-to-enter-beverage-market

https://twitter.com/ndcnn/status/1485650266712342529?ref_src=twsrc%5Etfw%7Ctwcamp%5Etweetembed%7Ctwterm%5E1485650266712342529%7Ctwgr%5E62489060719ed65951d6a69ea2e80784ac67611b%7Ctwcon%5Es1_&ref_url=https%3A%2F%2Fwww.freepressjournal.in%2Fbusiness%2Fmukesh-ambanis-reliance-brings-back-iconic-campa-cola-to-enter-beverage-market

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read