ಬೆಳಗಾವಿ: ಕನ್ನಡ, ಮರಾಠಿ ಭಾಷೆ ಬೇರೆಯಾದರೂ ಸಂಸ್ಕೃತಿ ಒಂದೇ. ಎರಡು ಭಾಷೆಗಳ ಸಂಸ್ಕೃತಿ ಒಂದೇ ಆಗಿದ್ದು, ಅದು ಹಿಂದೂ ಸಂಸ್ಕೃತಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಮಾತನಾಡಿದ ಅವರು, ಒಡೆದು ಆಳುವುದು ಬ್ರಿಟಿಷರ ನೀತಿ ಎಂದು ಎಲ್ಲರಿಗೂ ಗೊತ್ತಿದೆ. ಸ್ವಾತಂತ್ರ್ಯದ ಬಳಿಕ ಆ ನೀತಿಯನ್ನು ಕಾಂಗ್ರೆಸ್ ಅಳವಡಿಸಿಕೊಂಡಿದೆ. ವೀರಶೈವ, ಲಿಂಗಾಯಿತರ ನಡುವೆ ಒಡಕು ಮೂಡಿಸುವ ಪ್ರಯತ್ನ ನಡೆಸಲಾಗಿದೆ. ಕಳೆದ ಚುನಾವಣೆಯಲ್ಲಿ ಒಡಕು ಮೂಡಿಸಲು ಪ್ರಯತ್ನಿಸಿದ್ದರು. ಆದರೆ, ಸಮುದಾಯ ನಡುವೆ ಒಡಕು ತರುವುದರಲ್ಲಿ ಯಶಸ್ವಿಯಾಗಲಿಲ್ಲ ಎಂದು ಹೇಳಿದ್ದಾರೆ.