ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮದುವೆ ಸಮಾರಂಭದಲ್ಲಿ ನೃತ್ಯ ಮಾಡುವ ಮಹಿಳೆಯ ಮೇಲೆ ಕರೆನ್ಸಿ ನೋಟುಗಳನ್ನು ಸುರಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಟೀಕಿಸಿದೆ.
ವಿಡಿಯೋದಲ್ಲಿ ಹುಬ್ಬಳ್ಳಿಯ ಕಾಂಗ್ರೆಸ್ ಕಾರ್ಯಕರ್ತ ಶಿವಶಂಕರ ಹಂಪಣ್ಣ ಎಂಬಾತ ಮಹಿಳೆಯ ಪಕ್ಕದಲ್ಲಿ ಡ್ಯಾನ್ಸ್ ಮಾಡಿ ಹಣ ಎಸೆದಿರುವುದು ಕಂಡು ಬಂದಿದೆ. ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಮದುವೆಯ ಅಂಗವಾಗಿ ನಡೆದ ಹಳದಿ ಸಮಾರಂಭದಲ್ಲಿ ಈ ಘಟನೆ ನಡೆದಿದೆ.
ಕ್ಷಮೆಯಾಚಿಸಲು ಬಿಜೆಪಿ ಆಗ್ರಹ
ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಇದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಟಿವಿಯಲ್ಲಿ ವಿಡಿಯೋ ನೋಡಿದ್ದೇನೆ ಎಂದು ಹೇಳಿದ್ದಾರೆ. ಹುಡುಗಿಯೊಬ್ಬಳು ಡ್ಯಾನ್ಸ್ ಮಾಡುವಾಗ ಅವಳ ಮೇಲೆ ಹಣವನ್ನು ಎಸೆಯಲಾಗಿದೆ. ಈ ಜನರಿಗೆ ಹಣದ ಬೆಲೆ ತಿಳಿದಿಲ್ಲ, ಇಂತಹ ನಿದರ್ಶನಗಳು ಕಾಂಗ್ರೆಸ್ ಸಂಸ್ಕೃತಿ ಏನೆಂದು ತೋರಿಸುತ್ತದೆ. ನಾನು ಸಂಪೂರ್ಣವಾಗಿ ಇದನ್ನು ಖಂಡಿಸುತ್ತೇನೆ. ಕಾಂಗ್ರೆಸ್ ಈ ಬಗ್ಗೆ ಗಮನಹರಿಸಬೇಕು ಎಂದು ಹೇಳಿದ್ದಾರೆ.
ಬಿಜೆಪಿ ವಕ್ತಾರ ರವಿ ನಾಯ್ಕ್ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಕಾಂಗ್ರೆಸ್ ನವರು ಹೆಣ್ಣು ಮಕ್ಕಳಿಗೆ ಏನು ಗೌರವ ನೀಡುತ್ತಿದ್ದಾರೆ ಎಂಬುದೇ ನನ್ನ ಪ್ರಶ್ನೆ. ಇದು ಕೇವಲ ಕಾಂಗ್ರೆಸ್ಸಿನ ಸಂಸ್ಕೃತಿ ಎಂದು ಭಾಸವಾಗುತ್ತಿದೆ. ಏಕೆಂದರೆ ಮದುವೆ ಸ್ಥಳದಲ್ಲಿ ಹೆಣ್ಣುಮಕ್ಕಳಿಗೆ ಹಣ ಎಸೆಯುವ ಸಂಸ್ಕೃತಿ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗ ರಾಜಕೀಯ ಪಕ್ಷದ ನಾಯಕರೊಬ್ಬರು ಈ ರೀತಿ ವರ್ತಿಸುವುದು ಸಂಪೂರ್ಣವಾಗಿ ತಪ್ಪು. ಕಾಂಗ್ರೆಸ್ ಕಾರ್ಯಕರ್ತರು ಕೂಡಲೇ ಮಹಿಳೆಯ ಕ್ಷಮೆಯಾಚಿಸಬೇಕು ಮತ್ತು ಘಟನೆಯು “ಮಹಿಳೆಯರಿಗೆ ಸಂಪೂರ್ಣವಾಗಿ ಅಗೌರವ” ತೋರಿದಂತಾಗಿದೆ ಎಂದು ಅವರು ಹೇಳಿದ್ದಾರೆ.