ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾದ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ

ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರು ನ್ಯೂಜಿಲೆಂಡ್‌ನಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಬಲಗೈ ವೇಗದ ಬೌಲರ್ ಕಳೆದ ವರ್ಷ ಸೆಪ್ಟೆಂಬರ್‌ನಿಂದ ಸ್ಪರ್ಧಾತ್ಮಕ ಕ್ರಿಕೆಟ್ ನಿಂದ ಹೊರಗುಳಿದಿದ್ದಾರೆ. ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಐಪಿಎಲ್ ನಿಂದ ಹೊರಗುಳಿಯಲಿದ್ದಾರೆ.

29 ವರ್ಷ ವಯಸ್ಸಿನ ಬುಮ್ರಾ ಈಗ ತ್ವರಿತವಾಗಿ ಚೇತರಿಸಿಕೊಳ್ಳುವ ಗುರಿ ಹೊಂದಿದ್ದಾರೆ. ICC ಪುರುಷರ T20 ವಿಶ್ವಕಪ್ ತಂಡದ ಭಾಗವಾಗಲು ಅವಕಾಶವನ್ನು ಕಳೆದುಕೊಂಡ ನಂತರ ಈ ವರ್ಷದ ODI ವಿಶ್ವಕಪ್ ತಂಡವನ್ನು ಸೇರಿಕೊಳ್ಳಲು ಎದುರು ನೋಡುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ಸ್ಪೀಡ್‌ ಸ್ಟರ್ ಬುಮ್ರಾ ಮಾರ್ಚ್ ಅಂತ್ಯದವರೆಗೆ ನ್ಯೂಜಿಲೆಂಡ್‌ನಲ್ಲಿ ಇರಲಿದ್ದಾರೆ. ಅವರ ಪುನರಾಗಮನದ ಬಗ್ಗೆ BCCI ಯ ವೈದ್ಯಕೀಯ ಸಿಬ್ಬಂದಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read